ಸಾಗರ  ಕ್ಷೇತ್ರ ಟಿಕೆಟ್ ಗೊಂದಲಕ್ಕೆ ಬಿಎಸ್’ವೈ ತೆರೆ;ಹಾಲಪ್ಪನಾ? ಬೇಳೂರು ಗೋಪಾಲ ಕೃಷ್ಣನಾ?

First Published 29, Mar 2018, 4:32 PM IST
BSY Clarifies  Ticket Issue in Sagara Constituency
Highlights

ಸಾಗರ  ಕ್ಷೇತ್ರದ ಟಿಕೆಟ್ ಗೊಂದಲಕ್ಕೆ  ಬಿ.ಎಸ್.ಯಡಿಯೂರಪ್ಪ ತೆರೆ ಎಳೆದಿದ್ದಾರೆ.  ಸರ್ವೆ ಆಧರಿಸಿ ಟಿಕೇಟ್ ಕೊಡುವುದಾಗಿ   ಬಿಎಸ್ ವೈ ಟಿಕೆಟ್ ಆಕಾಂಕ್ಷಿಗಳಿಗೆ ಭರವಸೆ ನೀಡಿದ್ದಾರೆ.  ಯಾವುದೇ ಕಾರಣಕ್ಕೂ  ಕ್ಷೇತ್ರದಲ್ಲಿ ಗೊಂದಲ ಉಂಟು ಮಾಡದಂತೆ  ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣರಿಗೆ ಬಿಎಸ್ ವೈ ಸೂಚನೆ ನೀಡಿದ್ದಾರೆ. 

ಶಿವಮೊಗ್ಗ (ಮಾ. 29): ಸಾಗರ  ಕ್ಷೇತ್ರದ ಟಿಕೆಟ್ ಗೊಂದಲಕ್ಕೆ  ಬಿ.ಎಸ್.ಯಡಿಯೂರಪ್ಪ ತೆರೆ ಎಳೆದಿದ್ದಾರೆ.  ಸರ್ವೆ ಆಧರಿಸಿ ಟಿಕೇಟ್ ಕೊಡುವುದಾಗಿ   ಬಿಎಸ್ ವೈ ಟಿಕೆಟ್ ಆಕಾಂಕ್ಷಿಗಳಿಗೆ ಭರವಸೆ ನೀಡಿದ್ದಾರೆ.  ಯಾವುದೇ ಕಾರಣಕ್ಕೂ  ಕ್ಷೇತ್ರದಲ್ಲಿ ಗೊಂದಲ ಉಂಟು ಮಾಡದಂತೆ  ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣರಿಗೆ ಬಿಎಸ್ ವೈ ಸೂಚನೆ ನೀಡಿದ್ದಾರೆ. 

ಬೆಂಗಳೂರಿನಲ್ಲಿ ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ  ಜೊತೆಗೆ ಮಾತುಕತೆ ನಡೆಸಿದ್ದಾರೆ.  ಚರ್ಚೆಯ ವೇಳೆ ಮುನಿಸು ಹೊರ ಹಾಕಿದ ಇಬ್ಬರನ್ನು ಸಮಾಧಾನ ಮಾಡಿದ್ದಾರೆ.  ಕ್ಷೇತ್ರದಲ್ಲಿ ಗೊಂದಲ ಮಾಡಿ ಅನಗತ್ಯವಾಗಿ ಕಾರ್ಯಕರ್ತರಿಗೆ ಬೇಸರ ಮಾಡಬೇಡಿ.  ಕ್ಷೇತ್ರದಲ್ಲಿ ಸರ್ವೆ ನಡೆಸಲಾಗಿದ್ದು, ಸರ್ವೆ ವರದಿಯಂತೆ ನಾವು ಟಿಕೇಟ್ ಫೈನಲ್ ಮಾಡುತ್ತೇವೆ.  ಪಕ್ಷದ ಹೈಕಮಾಂಡ್ ತಿರ್ಮಾನವನ್ನು ಇಬ್ಬರೂ ನಾಯಕರು ಒಪ್ಪಿಕೊಂಡು ಕೆಲಸ ಮಾಡಬೇಕು. ಟಿಕೆಟ್ ವಿಚಾರದಲ್ಲಿ ಗೊಂದಲ ಮುಂದುವರೆದರೆ  ಎಲ್ಲರೂ ಹೊಣೆಗಾರರಾಗಬೇಕಾಗುತ್ತದೆ ಎಂದು ಸೂಚನೆ ನೀಡಿದ್ದಾರೆ. 

ಯಡಿಯೂರಪ್ಪ ನೀಡಿದ ಸೂಚನೆಗೆ ಸಹಮತ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದಿದ್ದಾರೆ  ನಾಯಕರು.

loader