ಯಡಿಯೂರಪ್ಪ ಸೋಲಿಸಲು ಒಂದು ದಿನ ಸಾಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ  ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. 

ಶಿವಮೊಗ್ಗ (ಏ. 06): ಯಡಿಯೂರಪ್ಪ ಸೋಲಿಸಲು ಒಂದು ದಿನ ಸಾಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. 

ಶಿಕಾರಿಪುರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಪ್ರಚಾರಕ್ಕೆ ಬಂದರೆ ಸ್ವಾಗತ ಎಂದು ಸಿಎಂ ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದ್ದಾರೆ. 

ನಾನು ಶಿಕಾರಿಪುರ ಪ್ರಚಾರ ಮಾಡದೆ ಇದ್ರು ಜನ ಗೆಲ್ಲಿಸ್ತಾರೆ ಎನ್ನುವ ವಿಶ್ವಾಸ ಇದೆ. ಸಿದ್ದರಾಮಯ್ಯಗೆ ಬೇರೆ ಕ್ಷೇತ್ರ ಹೇಗೂ ಇರಲಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಗೆಲ್ಲಲಿ ಎಂದು ಸಿಎಂಗೆ ಸವಾಲು ಹಾಕಿದ್ದಾರೆ.

ನಾಮಪತ್ರ ಸಲ್ಲಿಸೋಕೆ ಒಂದು ದಿನ ಹೋಗ್ತೇನೆ. ಬಳಿಕ ಪ್ರಚಾರಕ್ಕೆ ಒಂದು ದಿನ ಶಿಕಾರಿಪುರಕ್ಕೆ ಹೋಗುತ್ತೇನೆ. ಈ ಹಿಂದೆ ಮೂರು ಲಕ್ಷ ಮತಗಳಿಂದ ಕ್ಷೇತ್ರದ ಜನ ಗೆಲ್ಲಿಸಿದ್ರು. ಸಿದ್ದರಾಮಯ್ಯ ಮತ್ತು ಅವರ ಮಗ ಮೊದಲು ಗೆಲ್ಲಲಿ ನೋಡೊಣ 
ಎಂದಿದ್ದಾರೆ.