ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಃ ಕಾರಣ ಸುಳ್ಳು ಮೊಕದ್ದಮೆ ಹಾಕಿಸುತ್ತೀಯಲ್ಲ  ನಿನಗೆ ನಾಚಿಕೆ ಆಗಬೇಕು.

ಚಾಮರಾಜನಗರ(ಮಾ.21):ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರಾಜ್ಯಕ್ಕೆ ಶನಿ ಇದ್ದಂಗೆ. ಮೊದಲು ಅಧಿಕಾರದಿಂದ ತೊಲಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಲಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ತೆರಕಣಾಂಬಿಯಲ್ಲಿ ಇಂದು ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಎಸ್ ವೈ ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಃ ಕಾರಣ ಸುಳ್ಳು ಮೊಕದ್ದಮೆ ಹಾಕಿಸುತ್ತೀಯಲ್ಲ ನಿನಗೆ ನಾಚಿಕೆ ಆಗಬೇಕು. ಇನ್ನು ಏಳು-ಎಂಟು ತಿಂಗಳಿನಲ್ಲಿ ನಿಮ್ಮ ತುಘಲಕ್ ದರ್ಬಾರ್ ಕೊನೆಯಾಗಲಿದೆ. ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು. ಮುಂದೆ ನಾವೇ ಅಧಿಕಾರಕ್ಕೆ ಬರುವುದು ಖಚಿತ, ಆಗ ನಮಗೆ ನೀವೇ ಸಲ್ಯೂಟ್ ಹೊಡೆಯಬೇಕಾಗುತ್ತೆ. ನಿಮಗೆ ಪಾಠ ಕಲಿಸಬೇಕಾಗುತ್ತದೆ ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.