ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ, ಹಣ, ಹೆಂಡದ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲಬಹುದೆಂದು ಸಿದ್ದರಾಮಯ್ಯ ಭಾವಿಸಿದ್ದಾರೆ ಅದು ಸಾಧ್ಯವಿಲ್ಲ ಎಂದು ಹೊನ್ನಾಳಿ ಪರಿವರ್ತನಾ ವೇದಿಕೆಯಲ್ಲಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ದಾವಣಗೆರೆ (ಡಿ.27): ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ, ಹಣ, ಹೆಂಡದ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲಬಹುದೆಂದು ಸಿದ್ದರಾಮಯ್ಯ ಭಾವಿಸಿದ್ದಾರೆ ಅದು ಸಾಧ್ಯವಿಲ್ಲ ಎಂದು ಹೊನ್ನಾಳಿ ಪರಿವರ್ತನಾ ವೇದಿಕೆಯಲ್ಲಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನೀವು ಅಚ್ಛೇ ದಿನ ಯಾವಾಗ ಬರುತ್ತದೆ ಎಂದು ಕೇಳಿದ್ದಿರಿ ನಿಮ್ಮನ್ನು ಮನೆಗೆ ಕಳಿಸಿದಾಗ ಅಚ್ಛೆ ದಿನ ಬರುತ್ತದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಂಗಳೂರು ರೇಪ್ ಸಿಟಿಯಾಗಿದೆ. 3,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಈ ಎಲ್ಲವುಗಳ ಬಗ್ಗೆ ಒಮ್ಮೆ ಕೂತು ಯೋಚಿಸಿ ಎಂದು ಬಿಎಸ್'ವೈ ಹೇಳಿದ್ದಾರೆ.
ಹಸಿರು ಶಾಲು ಹಾಕಿಕೊಂಡಿದ್ದಕ್ಕೆ ತೆಗಳುವ ಸಿದ್ದರಾಮಯ್ಯ ನೀವು ರೈತರ ಬಗ್ಗೆ ಯಾವಾತ್ತಾದರೂ ಯೋಚಿಸಿದ್ದೀರಾ? ಆರ್ಥಿಕ ದಿವಾಳಿತನವಾಗಿಲ್ಲವೆಂದು ಹೇಳುತ್ತೀರಿ. ಆದ್ರೆ ಬೆಂಗಳೂರಿನ ಕಾರ್ನರ್ ಸೈಟ್ ಒತ್ತೆ ಇಟ್ಟಿದ್ದು ಏಕೆ? ಎಂಎಲ್'ಎ, ಎಂಎಲ್'ಸಿಗಳಿಗೆ ವೇತನ ಕೊಟ್ಟಿಲ್ಲವೇಕೆ ? ಎಂದು ಪ್ರಶ್ನಿಸಿದ್ದಾರೆ.
ಮಹಾದಾಯಿ ವಿಚಾರದ ಬಗ್ಗೆ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ಮೂವತ್ತು ವರ್ಷದ ನಂತರ ಗೋವಾದ ಸಿಎಂ ಒಪ್ಪಿಕೊಂಡಿದ್ದಾರೆ . ಆದರೆ ಕಾಂಗ್ರೆಸ್ ಪ್ರೇರಿತರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ .ನಾವು ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಕ್ಕೆ ಪೊಲೀಸ್ ಲಾಠಿ ಚಾರ್ಜ್ ಮಾಡಿಸುತ್ತಾರೆ . ಸಮಸ್ಯೆ ಬಗೆಹರಿಸಲು ಮುಂದಾಗಿರುವ ಗೋವಾ ಸಿಎಂ ಕ್ರಮಕ್ಕೆ ವಿರೋಧ ಮಾಡುತ್ತಿರುವ ಸಿದ್ದರಾಮಯ್ಯನವರೇ, ನಿಮಗೆ ನಾಚಿಕೆ ಆಗೋಲ್ವ? ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
