ದಲಿತರ ಮನೆಯಲ್ಲಿನ ಊಟಕ್ಕೆ ಸಂಬಂಧಿಸಿದ ವಿವಾದಕ್ಕೆ ಯಡಿಯೂರಪ್ಪ ಅಂತ್ಯ ಹಾಡಿದ್ದಾರೆ. ಒಂದೇ ದಿನ ಎರಡು ಕಡೆ ದಲಿತರ ಮನೆಯಲ್ಲಿ ಊಟ ಸೇವನೆ ಮಾಡಿದ್ದಾರೆ. ದಲಿತರ ಮನೆಯಲ್ಲೇ ತಯಾರಿಸಿದ ತಿಂಡಿ, ಊಟ ಸೇವಿಸಿ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವಲ್ಲಿ ಬಿಎಸ್​​ವೈ ಯಶಸ್ವಿ ಆಗಿದ್ದಾರೆ.

ಬಾಗಲಕೋಟೆ(ಮೇ.23): ದಲಿತರ ಮನೆಯಲ್ಲಿನ ಊಟಕ್ಕೆ ಸಂಬಂಧಿಸಿದ ವಿವಾದಕ್ಕೆ ಯಡಿಯೂರಪ್ಪ ಅಂತ್ಯ ಹಾಡಿದ್ದಾರೆ. ಒಂದೇ ದಿನ ಎರಡು ಕಡೆ ದಲಿತರ ಮನೆಯಲ್ಲಿ ಊಟ ಸೇವನೆ ಮಾಡಿದ್ದಾರೆ. ದಲಿತರ ಮನೆಯಲ್ಲೇ ತಯಾರಿಸಿದ ತಿಂಡಿ, ಊಟ ಸೇವಿಸಿ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವಲ್ಲಿ ಬಿಎಸ್​​ವೈ ಯಶಸ್ವಿ ಆಗಿದ್ದಾರೆ.

ಬರ ಅಧ್ಯಯನ ಮತ್ತು ಜನಸಂಪರ್ಕ ಅಭಿಯಾನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರೋ ಯಡಿಯೂರಪ್ಪ ಅಂಡ್ ಟೀಂ ನಿನ್ನೆ ಬಾಗಲಕೋಟೆಗೆ ಭೇಟಿ ನೀಡಿತ್ತು. ಈ ವೇಳೆ ಯಡಿಯೂರಪ್ಪ ಮತ್ತು ತಂಡ ರಂಗಪ್ಪ ಕುಂದರಗಿ ಎಂಬ ದಲಿತ ಕುಟುಂಬದ ಮನೆಯಲ್ಲಿ ದಲಿತ ಮಹಿಳೆಯರೇ ತಯಾರಿಸಿದ ಮಂಡಕ್ಕಿಯ ಸೂಸಲ, ಗಟ್ಟಿಮೊಸರು, ಚಟ್ನಿ, ಸೇವ್​, ಕಾರದಾನಿ, ಪೇಡ ಹೀಗೆ ವಿವಿಧ ಬಗೆಯ ಖಾದ್ಯಗಳನ್ನ ಸೇವಿಸಿದರು.

ಮದ್ಯಾಹ್ನ ಬಾದಾಮಿ ತಾಲೂಕಿನ ಅನಂತಗಿರಿ ಗ್ರಾಮದ ದಲಿತ ಪಕೀರಪ್ಪ ಹಿರೇಮನಿಯವರ ಮನೆಯಲ್ಲಿ ಚಪಾತಿ, ರೊಟ್ಟಿ, ಬದನೆಕಾಯಿ ಪಲ್ಲೆ, ಅನ್ನ ಸಾಂಬಾರ್ ಊಟ ಮಾಡಿದ ಬಿಎಸ್ ವೈ ಕಾಂಗ್ರೆಸ್​ ನಾಯಕರಿಗೆ ಟಾಂಗ್ ನೀಡಿದರು. ಈ ವೇಳೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ರು.

ಒಟ್ಟಿನಲ್ಲಿ ವಿಪಕ್ಷಗಳ ವಾಗ್ವಾದಕ್ಕೆ ಕಾರಣವಾಗಿದ್ದ ದಲಿತರ ಮನೆಯಲ್ಲಿನ ಊಟದ ಪ್ರಕರಣಕ್ಕೆ ಬಿಎಸ್ ವೈ ನಿನ್ನೆ ತಿಲಾಂಜಲಿ ಹಾಡಿದ್ದಾರೆ. ಮತ್ತೆ ಯಾವ ವಿವಾದ ಮೈಮೇಲೆ ಬರುತ್ತದೋ ಕಾದು ನೋಡಬೇಕಿದೆ.