ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಮಾಜಿ ಶಾಸಕ ದಿನಕರಶೆಟ್ಟಿ ಹಾಗೂ ಪ್ರಮೋದ್​ ಹೆಗ್ಡೆಯವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ಯಡಿಯೂರಪ್ಪ, ಗೋವಿಂದರಾಜು ಡೈರಿಯಿಂದ ಬಹಳ ಸಹಾಯವಾಗಿದೆ, ಅವರು ಹಣ ಹೇಗೆ ಸಾಗಿಸುತ್ತಿದ್ದರು, ಯಾವಾಗ ಹಣ ಸಾಗಿಸಿದರು, ಎಷ್ಟೆಷ್ಟು ಹಣ ಸಾಗಿಸಿದರು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ, ಎಂದಿದ್ದಾರೆ.

ಬೆಂಗಳೂರು (ಫೆ.28): ಬಿ.ಎಸ್. ಯಡಿಯೂರಪ್ಪ ಇಂದು ಸಿಎಂ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಯೋಜಿಸಲಾಗಿರುವ ಸ್ಟೀಲ್ ಸೇತುವೆಯ ಗುತ್ತಿಗೆದಾರರು 65 ಕೋಟಿ ರೂಪಾಯಿಯನ್ನು ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೇ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಮಾಜಿ ಶಾಸಕ ದಿನಕರಶೆಟ್ಟಿ ಹಾಗೂ ಪ್ರಮೋದ್​ ಹೆಗ್ಡೆಯವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ಯಡಿಯೂರಪ್ಪ, ಗೋವಿಂದರಾಜು ಡೈರಿಯಿಂದ ಬಹಳ ಸಹಾಯವಾಗಿದೆ, ಅವರು ಹಣ ಹೇಗೆ ಸಾಗಿಸುತ್ತಿದ್ದರು, ಯಾವಾಗ ಹಣ ಸಾಗಿಸಿದರು, ಎಷ್ಟೆಷ್ಟು ಹಣ ಸಾಗಿಸಿದರು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ, ಎಂದಿದ್ದಾರೆ.

ಸ್ಟೀಲ್​ ಸೇತುವೆ ಗುತ್ತಿಗೆದಾರರು ಹಣ ಕೊಟ್ಟಿರುವುದನ್ನು ಒಪ್ಪಿಕೊಂಡಿರುವ ಮಾಹಿತಿ ಲಭ್ಯವಾಗಿದೆ, ಅವರು ಹಣ ಕೊಟ್ಟಿರುವುದು ಬೇರ್ಯಾರಿಗೂ ಅಲ್ಲ ಸಿಎಂ ಸಿದ್ದರಾಮಯ್ಯನವರ ಕುಟುಂಬಕ್ಕೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಯಡಿಯೂರಪ್ಪ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.