ಬಿಎಸ್ಪಿಗೆ ಬೀದರ್‌ನ ಪ್ರಮುಖರ ರಾಜಿನಾಮೆ

BSP leaders May Resigns
Highlights

ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ರಾಜ್ಯ ನಾಯಕರ ನಡೆಗೆ ಬೇಸರ ವ್ಯಕ್ತಪಡಿಸಿ ಮಾಜಿ ಶಾಸಕ ಜುಲ್ಫೀಕರ್‌ ಹಾಶ್ಮಿ, ಪಕ್ಷದ ಜಿಲ್ಲಾಧ್ಯಕ್ಷ ಅಂಕುಶ ಗೋಖಲೆ ಹಾಗೂ ತಾಲೂಕು ಅಧ್ಯಕ್ಷರು ಪಕ್ಷಕ್ಕೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.

ಬೀದರ್‌ : ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ರಾಜ್ಯ ನಾಯಕರ ನಡೆಗೆ ಬೇಸರ ವ್ಯಕ್ತಪಡಿಸಿ ಮಾಜಿ ಶಾಸಕ ಜುಲ್ಫೀಕರ್‌ ಹಾಶ್ಮಿ, ಪಕ್ಷದ ಜಿಲ್ಲಾಧ್ಯಕ್ಷ ಅಂಕುಶ ಗೋಖಲೆ ಹಾಗೂ ತಾಲೂಕು ಅಧ್ಯಕ್ಷರು ಪಕ್ಷಕ್ಕೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.

ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸೈಯದ್‌ ಜುಲ್ಫೀಕರ್‌ ಅವರು, ಬಿಎಸ್ಪಿ ರಾಜ್ಯ ಉಸ್ತುವಾರಿ ಅಶೋಕ ಸಿದ್ದಾರ್ಥ, ರಾಜ್ಯದ ಮಾರಸಂದ್ರ ಮುನಿಯಪ್ಪ ಹಾಗೂ ಎನ್‌.ಮಹೇಶ್‌ ಅವರು ಪಕ್ಷದ ಟಿಕೆಟ್‌ ಮಾರಾಟ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಬಿಎಸ್ಪಿಯವರು ಜೆಡಿಎಸ್‌ನೊಂದಿಗೆ ಕೈ ಜೋಡಿಸಿದರೆ, ಜೆಡಿಎಸ್‌ನವರು ರಾಜ್ಯಾದ್ಯಂತ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದ ಮುಖಂಡರು, ಮುಂಬರುವ ಚುನಾವಣೆಯಲ್ಲಿ ಮಾರಸಂದ್ರ ಮುನಿಯಪ್ಪ ನಮ್ಮ ವಿರೋಧಿ ರಹೀಮ್‌ಖಾನ್‌ಗೆ ಟಿಕೆಟ್‌ ಮಾರಾಟ ಮಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲೇ ಬಿಎಸ್ಪಿಯಿಂದ ಅತೀ ಹೆಚ್ಚು ಮತ ಪಡೆದಿದ್ದರೂ ಈ ಬಾರಿ ನನಗೆ ಟಿಕೆಟ್‌ ನಿರಾಕರಿಸಲಾಗಿದೆ. ರಾಜಕೀಯದಲ್ಲಿ ಸೋಲು-ಗೆಲುವು ಇದ್ದದ್ದೆ. ಹೀಗಾಗಿ ಗೋಖಲೆ ಹಾಗೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಗ್ಯಾರಂಟಿ ಎಂದು ಹಾಶ್ಮಿ ಸ್ಪಷ್ಟಪಡಿಸಿದರು.

loader