ಮೋದಿ ಮತ್ತು ಅಮಿತ್ ಶಾ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿಯನ್ನು ತಡೆಯಲು ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್‌ರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲು ಯೋಚಿಸುತ್ತಿದ್ದಾರೆ.
ಉಪ ಚುನಾವಣೆಗಳಲ್ಲಿ ಮಹಾಗಠಬಂಧನ್ ಮೂಲಕ ಅಖಿಲೇಶ್ ಯಾದವ್ ಮತ್ತು ಮಾಯಾವತಿ ರಾಜಕೀಯವಾಗಿ ಬಹಳ ಹತ್ತಿರ ಬಂದಿದ್ದರು. ಆಗ ಮಾಯಾವತಿ, ಇಬ್ಬರೂ ಸೇರಿ ಒಂದು ಜಿಲ್ಲೆಯಲ್ಲಿ 5 ಲಕ್ಷ ಜನರನ್ನು ಸೇರಿಸಿ ಸಭೆ ಮಾಡೋಣ ಎಂದು ಹೇಳಿದ್ದರಂತೆ. ಇದಕ್ಕೆ ಒಪ್ಪಿದ್ದ ಅಖಿಲೇಶ್, ಆಗಸ್ಟ್ ತಿಂಗಳಲ್ಲಿ 4 ಬಾರಿ ಮಾಯಾವತಿಗೆ ಫೋನ್ ಮಾಡಿದ್ದರಂತೆ. ಆದರೆ ಯಾಕೋ ಬೆಹೆನ್‌ಜೀ ಮಾತ್ರ ಮೋದಿ ವಿರುದ್ಧ ಸಭೆ ನಡೆಸಲು ಅಷ್ಟು ಆಸಕ್ತಿ ತೋರಿಸುತ್ತಿಲ್ಲವಂತೆ. ಮಧ್ಯಪ್ರದೇಶ ಸೇರಿದಂತೆ 3 ರಾಜ್ಯಗಳ ಚುನಾವಣೆಗಳು ಮುಗಿಯಲಿ, ಗಡಿಬಿಡಿ ಮಾಡಬೇಡಿ ಎಂದು ಹೇಳುತ್ತಾರಂತೆ ಮಾಯಾವತಿ. ನಿಧಾನವಾಗಿ ಸಮಾಜವಾದಿಗಳ ಪಾಳಯದಲ್ಲಿ ಮಾಯಾವತಿ ಎರಡು ಹಡಗು ಹತ್ತುವ ಯೋಚನೆಯಲ್ಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.
ಅಲ್ಪೇಶ್ ಠಾಕೂರ್‌ಗೆ ಪಟ್ಟ?
ಮೋದಿ ಮತ್ತು ಅಮಿತ್ ಶಾ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿಯನ್ನು ತಡೆಯಲು ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್‌ರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲು ಯೋಚಿಸುತ್ತಿದ್ದಾರೆ. ಕಳೆದ ವಾರ ಅಲ್ಲಿನ ನಾಯಕರನ್ನು ಕರೆಸಿದ್ದ ರಾಹುಲ್ ಗಾಂಧಿ, ಮೋದಿಯನ್ನು ತಡೆಯಬೇಕಾದರೆ ಕಾಂಗ್ರೆಸ್ ಕೂಡ ಹಿಂದುಳಿದ ವರ್ಗಗಳಿಗೆ ನಾಯಕತ್ವ ಕೊಡಬೇಕು ಎಂದು ಹೇಳಿದ್ದಾರಂತೆ.
(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ)
[ಸಾಂದರ್ಭಿಕ ಚಿತ್ರ]
