‘ರಾಜ್ಯಾದ್ಯಂತ ಬಿಜೆಪಿಯವರನ್ನು ಅಟ್ಟಾಡಿಸಿಕೊಂಡು ಹೊಡೆಯೋಣ’| ನಾಲಿಗೆ ಹರಿಬಿಡುತ್ತಿರುವ ರಾಜಕೀಯ ನೇತಾರರು| ಉತ್ತರಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿ ಹಿನ್ನೆಲೆ| ಬಾಯಿಗೆ ಬಂದಿದ್ದು ಮಾತನಾಡುತ್ತಿರುವ ಬಿಎಸ್‌ಪಿ ನಾಯಕರು| ಬಿಜೆಪಿಯವರನ್ನು ಅಟ್ಟಾಸಿಕೊಂಡು ಹೊಡೆಯೋಣ ಎಂದ ವಿಜಯ್ ಯಾದವ್
ಮೊರಾದಾಬಾದ್(ಜ.16): ಇತ್ತೀಚಿಗಷ್ಟೇ ಉತ್ತರಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿ ಮಾಡಿಕೊಂಡಿವೆ. ಈ ಪಕ್ಷಗಳ ಉದ್ದೇಶ ಒಂದೇ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು.
ಅದರಂತೆ ಮೈತ್ರಿಯಾಗುತ್ತಿದ್ದಂತೇ ಎರಡೂ ಪಕ್ಷಗಳ ನಾಯಕರು ಒಬ್ಬೊಬ್ಬರಾಗಿ ತಮ್ಮ ನಾಲಿಗೆಯನ್ನು ಹರಿಬಿಡಲು ಶುರುವಿಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಇನ್ನೇನು ಬಿಜೆಪಿ ಕತೆ ಮುಗೀತು ಅನ್ನುವಷ್ಟರ ಮಟ್ಟಿಗೆ ಈ ನಾಯಕರು ತಮ್ಮ ಮಾತಿನ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ.
ಇತ್ತೀಚಿಗೆ ಮೊರಾದಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಬಿಎಸ್‌ಪಿ ನಾಯಕ ವಿಜಯ್ ಯಾದವ್ ಕೂಡ ಇಂತದ್ದೇ ಹೇಳಿಕೆ ನೀಡಿದ್ದಾರೆ. ‘ಯಾರೂ ಹೆದರಬೇಕಾದ ಅವಶ್ಯಕತೆ ಇಲ್ಲ. ಬಿಜೆಪಿಯವರನ್ನು ರಾಜ್ಯಾದ್ಯಣಂತ ಅಟ್ಟಾಡಿಸಿಕೊಂಡು ಹೊಡೆಯೋಣ..’ ಎಂದು ಯಾದವ್ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
ಎಸ್‌ಪಿ-ಬಿಎಸ್‌ಪಿ ಒಂದಾಗಿರುವುದರಿಂದ ಬಿಜೆಪಿಯವರಿಗೆ ತಮ್ಮ ಮೃತ ಅಜ್ಜಿ ನೆನಪಾಗಿದೆ. ಇವರನ್ನು ರಾಜ್ಯಾದ್ಯಂತ ಅಟ್ಟಾಡಿಸಿಕೊಂಡು ಹೊಡೆಯುವ ದಿನ ದೂರವಿಲ್ಲ ಎಂದು ವಿಜಯ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
