ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಟೀಕಿಸಿದ್ದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಗೆ ಪ್ರಧಾನಿ ಮೋದಿ ಪ್ರತ್ಯುತ್ತರ ನೀಡಿದ್ದಾರೆ. ಮಾಯಾವತಿಯವರದ್ದು ಬಹುಜನ ಸಮಾಜವಾದಿ ಪಕ್ಷವಲ್ಲ ಬದಲಿಗೆ ‘ಬೆಹನ್ಜಿ ಸಂಪತ್ತಿ ಪಕ್ಷ’ ವಾಗಿ ಬದಲಾಗಿದೆ ಎಂದು ಟೀಕಿಸಿದ್ದಾರೆ.

ನವದೆಹಲಿ (ಫೆ.20): ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಟೀಕಿಸಿದ್ದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಗೆ ಪ್ರಧಾನಿ ಮೋದಿ ಪ್ರತ್ಯುತ್ತರ ನೀಡಿದ್ದಾರೆ. ಮಾಯಾವತಿಯವರದ್ದು ಬಹುಜನ ಸಮಾಜವಾದಿ ಪಕ್ಷವಲ್ಲ ಬದಲಿಗೆ ‘ಬೆಹನ್ಜಿ ಸಂಪತ್ತಿ ಪಕ್ಷ’ ವಾಗಿ ಬದಲಾಗಿದೆ ಎಂದು ಟೀಕಿಸಿದ್ದಾರೆ.

ನಾವು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಾಗ ಪ್ರತಿಪಕ್ಷಗಳು ಧ್ವನಿ ಎತ್ತಿವೆ. ಎಸ್ಪಿ ಮತ್ತು ಬಿಸ್ಪಿ ಕಟ್ಟಾ ವಿರೋಧಿಗಳಲ್ಲವೇ? ಆದರೂ ಡಿಮಾನಿಟೈಸೇಶನ್ ವೇಳೆ ಅವರೆಡೂ ಪಕ್ಷಗಳು ಒಂದಾಗಿರುವುದು ನನಗೆ ಆಶ್ಚರ್ಯ ತಂದಿದೆ. ನೋಟು ನಿಷೇಧದ ಬಳಿಕ ಮಾಯಾವತಿ ಅಕ್ರಮವಾಗಿ ಹಣ ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ ಎಂದು ಚುನಾವಣಾ ರ್ಯಾಲಿಯಲ್ಲಿ ಮೋದಿ ವ್ಯಂಗ್ಯವಾಡಿದ್ದಾರೆ.

ತಮ್ಮ ವಾಗ್ದಾಳಿಯನ್ನು ಮುಂದುವರೆಸುತ್ತಾ, ಬೆಹನ್ ಜಿ ಹೇಳುತ್ತಾರೆ; ನೋಟು ನಿಷೇಧಕ್ಕೆ ಸರಿಯಾಗಿ ಪ್ಲಾನ್ ಮಾಡಿಲ್ಲವೆಂದು. ಒಂದು ವಾರ ಸಮಯಾವಕಾಶ ಕೊಡಬೇಕಿತ್ತು ಎಂದಿದ್ದಾರೆ. ನಾನು ಅವರಿಗೆ ಕೇಳುತ್ತೇನೆ ಪ್ಲಾನ್ ಮಾಡುವುದು ನೀವೋ ಅಥವಾ ಸರ್ಕಾರವೋ? ಒಂದು ವೇಳೆ ನಾನು ಹಾಗೆ ಮಾಡಿದ್ದರೆ ಕೊಳ್ಳೆ ಹೊಡೆದವರೆಲ್ಲ ಮಾಯವಾಗಿಬಿಡುತ್ತಿದ್ದರು. ಬ್ಯಾಂಕುಗಳಿಗೆ ಹಣ ಬರುತ್ತಿರಲಿಲ್ಲ ಎಂದು ಮೋದಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.