ಉಳಿದ ಟೆಲಿಕಾಂ ಸಂಸ್ಥೆಗಳು ಜಿದ್ದಿಗೆ ಬಿದ್ದವರಂತೆ ಉಚಿತ ಆಫರ್'ಗಳನ್ನು ಪ್ರಕಟಿಸುತ್ತಿವೆ.

ನವದೆಹಲಿ(ಮಾ.25): ರಿಲಯನ್ಸ್ ಜಿಯೊ ಯಾವಾಗ 6 ತಿಂಗಳು ಕಾಲ ತನ್ನ ಗ್ರಾಹಕರಿಗೆ ಉಚಿತ ಇಂಟರ್'ನೆಟ್ ಸೇವೆ ಒದಗಿಸಿತೊ ಉಳಿದ ಟೆಲಿಕಾಂ ಸಂಸ್ಥೆಗಳು ಜಿದ್ದಿಗೆ ಬಿದ್ದವರಂತೆ ಉಚಿತ ಆಫರ್'ಗಳನ್ನು ಪ್ರಕಟಿಸುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರಿ ಸ್ವಾಮ್ಯದ ಬಿಎಸ್'ಎನ್'ಎಲ್ ಸಂಸ್ಥೆ ಸ್ಮಾರ್ಟ್ ಫೋನ್ ಹೊಂದಿದ್ದು, ಜಿಎಸ್'ಎಂ ಮೊಬೈಲ್ ಡಾಟಾ ಸೇವೆಗಳನ್ನು ಉಪಯೋಗಿಸದ ಬಳಕೆದಾರರಿಗೆ 1 ಜಿಬಿ ಉಚಿತ ಇಂಟರ್'ನೆಟ್ ಸೌಲಭ್ಯ ಪ್ರಕಟಿಸಿದೆ. ಈ ಸೇವೆ ಪ್ರೀಪೇಯ್ಡ್ ಸಿಮ್ ಹೊಂದಿರುವವರಿಗೆ ಅನ್ವಯವಾಗಲಿದೆ.

ಈಗಾಗಲೇ ಬಿಎಸ್'ಎನ್'ಎಲ್' ಜಿಯೋಗೆ ಸಮನಾಗಿ 339 ರೂ.ಗಳಿಗೆ ನಿತ್ಯ 2 ಜಿಬಿ ಇಂಟರ್'ನೆಟ್, 25 ನಿಮಿಷ ಉಚಿತ ಕರೆ ಹಾಗೂ 25 ನಿಮಿಷದ ನಂತರ ಪ್ರತಿ ನಿಮಿಷಕ್ಕೆ 25 ಪೈಸೆಯಂತೆ ಕರೆ ದರವನ್ನು ಪ್ರಕಟಿಸಿದೆ. ಜಿಯೋ ಏಪ್ರಿಲ್ 1ರಿಂದ 303 ರೂ.ಗಳಿಗೆ ನಿತ್ಯ 1 ಜಿಬಿ ಇಂಟರ್'ನೆಟ್ ಹಾಗೂ ಉಚಿತ ಕರೆ ಹಾಗೂ ಎಸ್'ಎಂಎಸ್ ಆಫರ್ ಕಲ್ಪಿಸಿದೆ.