ಜಿಯೋಗೆ ಸೆಡ್ದು ಹೊಡೆದ ಬಿಎಸ್ಎನ್ಎಲ್

First Published 23, Jul 2018, 12:26 PM IST
BSNL Revises FTTH Broadband Plans to Offer Up to 3TB Data at 100Mbps to Combat Jio GigaFiber
Highlights

  • 3999 ರೂ., 5999 ರೂ.,9999 ರೂ ಹಾಗೂ 16999 ರೂ. ಯೋಜನೆಗಳನ್ನು ಪರಿಷ್ಕೃತಗೊಳಿಸಿದ ಬಿಎಸ್ಎನ್'ಎಲ್
  • ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ಸ್ಪರ್ಧಾತ್ಮಕ ಆಫರ್'ಗಳ ಪೈಪೋಟಿ 

ಮುಂಬೈ[ಜು.23]: ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ಎಲ್   ಫೈಬರ್ ನೆಟ್'ನ ಹಾಲಿ ಯೋಜನೆಗಳನ್ನು ಪರಿಷ್ಕರಿಸಿ ಭರಪೂರ ಆಫರ್'ಗಳನ್ನು ಪ್ರಕಟಿಸಿದೆ.

ಪ್ರಸ್ತುತವಿರುವ 3999 ರೂ., 5999 ರೂ.,9999 ರೂ ಹಾಗೂ 16999 ರೂ. ಯೋಜನೆಗಳನ್ನು ಪರಿಷ್ಕರಿಸಲಾಗಿದೆ. 3999 ರೂ.ಗೆ 50 ಎಂಬಿಪಿಎಸ್ ವೇಗದಲ್ಲಿ 500 ಜಿಬಿ ಡಾಟಾ, 5999 ರೂ.ಗಳಿಗೆ 60 ಎಂಬಿಪಿಎಸ್ 1000 ಜಿಬಿ ಡಾಟಾ, 9999 ರೂ. ಯೋಜನೆಯಲ್ಲಿ 80 ಎಂಬಿಪಿಎಸ್ ವೇಗದೊಂದಿಗೆ 2ಟಿಬಿ ಡಾಟಾ ಹಾಗೂ 16999 ರೂ. ಗಳಿಗೆ 100 ಎಂಬಿಪಿಎಸ್ ವೇಗದೊಂದಿಗೆ 3 ಟಿಬಿ ಡಾಟಾ ದೊರೆಯಲಿದೆ. 

ಇವೆಲ್ಲ ತಿಂಗಳ ಯೋಜನೆಯಾಗಿದ್ದು ಡಾಟಾ ಮಿತಿ ಮುಗಿದ ನಂತರ 4 ಎಂಬಿಪಿಎಸ್ ವೇಗದೊಂದಿಗೆ ಅನಿಯಮಿತ ಡಾಟಾ ಲಭ್ಯವಾಗಲಿದೆ. ಇತ್ತೀಚಿಗಷ್ಟೆ  ಜಿಯೋ ಕೂಡ 1100 ಪಟ್ಟಣಗಳಿಗೆ ಕಡಿಮೆ ದರದಲ್ಲಿ ಅತ್ಯುತ್ತಮ ಆಫರ್'ಗಳೊಂದಿಗೆ ಫೈಬರ್ ನೆಟ್ ಯೋಜನೆ ಕಲ್ಪಿಸಿತ್ತು. 

loader