ಉತ್ತರ ಬಂಗಾಳದಲ್ಲಿ ಭಾರೀ ಪ್ರವಾಹದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗಡಿ ಭದ್ರತಾ ಸಿಬ್ಬಂದಿ ಸೊಂಟದವರೆಗೆ ನೀರಿದ್ದರೂ ಕರ್ತವ್ಯ ನಿರತರಾಗಿರುವ ಫೋಟೊಗಳನ್ನು ಬಿಎಸ್‍'ಎಫ್ ಟ್ವೀಟ್ ಮಾಡಿದ್ದು ಈ ಫೋಟೊ ವೈರಲ್ ಆಗಿದೆ.
ಪ.ಬಂಗಾಳ (ಆ.15): ಉತ್ತರ ಬಂಗಾಳದಲ್ಲಿ ಭಾರೀ ಪ್ರವಾಹದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗಡಿ ಭದ್ರತಾ ಸಿಬ್ಬಂದಿ ಸೊಂಟದವರೆಗೆ ನೀರಿದ್ದರೂ ಕರ್ತವ್ಯ ನಿರತರಾಗಿರುವ ಫೋಟೊಗಳನ್ನು ಬಿಎಸ್'ಎಫ್ ಟ್ವೀಟ್ ಮಾಡಿದ್ದು ಈ ಫೋಟೊ ವೈರಲ್ ಆಗಿದೆ.
ಬಿಎಸ್ಎಫ್ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಕರ್ತವ್ಯ ನಿರತ ಯೋಧರ ಫೋಟೊವನ್ನು ಶೇರ್ ಮಾಡಲಾಗಿತ್ತು.ಅಂತರಾಷ್ಟ್ರೀಯ ಗಡಿಗೆ ಸಮಾನಾಂತರವಾಗಿ ಹರಿಯುತ್ತಿರುವ ಪುನರ್ಭಬ ನದಿಯಲ್ಲಿ ನಿಂತು ಯೋಧರು ಗಡಿ ಕಾಯುತ್ತಿರುವ ಫೋಟೊ ಆಗಿತ್ತು ಅದು. ಈ ಫೋಟೊವನ್ನು ರಿಟ್ವೀಟ್ ಮಾಡಿರುವ ದೇಶದ ಬಹುತೇಕಜನರು ಯೋಧರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಮುಳುಗುವಷ್ಟು ನೀರು ಬಂದಿದ್ದರೂ ಅದನ್ನು ಲೆಕ್ಕಿಸದೇ ದೇಶ ಕಾಯುವ ಇವರ ತ್ಯಾಗಕ್ಕೆ ನಾವು ಸಲಾಂ ಹೇಳಲೇಬೇಕು!



