ಜಮ್ಮು(ಅ.26): ಪಾಕಿಸ್ತಾನಿ ಪಡೆಗಳು ಅಂತರರಾಷ್ಟ್ರೀಯ ಗಡಿ ರೇಖೆ ಉಲ್ಲಂಘಿಸಿ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಓರ್ವ ಗಡಿ ರಕ್ಷಣಾ ಪಡೆಯ ಅಧಿಕಾರಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಬಿಎಸ್ಎಫ್ ಪಡೆಯ ಸಹಾಯಕ ಸಬ್'ಇನ್ಸ್'ಪೆಕ್ಟರ್ ಎ.ಕೆ. ಉಪಾಧ್ಯಾಯ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮ್ಮುವಿನ ಆರ್'ಎಸ್ ಪುರ ಸೆಕ್ಟರ್'ನಲ್ಲಿ ಮಂಗಳವಾರ ತಡರಾತ್ರಿ 11.30ರವರೆಗೂ ಉಭಯ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಇನ್ನೂ ಆರ್'ಎಸ್ ಪುರ ಸೆಕ್ಟರ್'ನ ಕೆಲವೆಡೆ ಪಾಕ್ ಪಡೆಗಳು ಶೆಲ್ ದಾಳಿ ನಡೆಸುತ್ತಿವೆ ಎಂದು ಜಮ್ಮು ವಿಭಾಗದ ಡಿಐಜಿ ಧರ್ಮೇಂದರ್ ಪರೇಶ್ ತಿಳಿಸಿದ್ದಾರೆ.  

ಕಳೆದ ಅಕ್ಟೋಬರ್ 24 ರಂದು ಆರ್'ಎಸ್ ಪುರ ಸೆಕ್ಟರ್'ನಲ್ಲಿ ಪಾಕ್ ಪಡೆಗಳ ನಡೆಸಿದ ಭಾರೀ ಶೆಲ್ ದಾಳಿಯಲ್ಲಿ ಆರು ವರ್ಷದ ಮಗು ಸೇರಿದಂತೆ ಓರ್ವ ಬಿಎಸ್'ಎಫ್ ಯೋಧ ಮೃತಪಟ್ಟಿದ್ದರು.