ಬೆಂಗಳೂರು, [ಸೆ.19]: ಮೈತ್ರಿ ಸರ್ಕಾರದ ಒಂದೊಂದೇ ಯೋಜನೆಗಳನ್ನು ತನಿಖೆಗೆ ಆದೇಶಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇದೀಗ ಕುಮಾರಸ್ವಾಮಿ ನಿಯೋಜಿಸಿದ್ದ ಸಿಬ್ಬಂದಿಗೆ ಕೊಕ್ ಕೊಟ್ಟಿದ್ದಾರೆ.

 ಸಿಎಂ ಕಚೇರಿಯಲ್ಲಿನ 21 ಸಿಬ್ಬಂದಿಗಳು ಮತ್ತು ಅಧಿಕಾರಿಗಳಿಗೆ ಬಿಎಸ್ ವೈ ಕೊಕ್ ನೀಡಿದ್ದು,  ಇಂದು (ಗುರುವಾರ] ಬೆಳಿಗ್ಗೆ ಎಲ್ಲರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದರು. 

ಅತ್ತ ಡಿಕೆಶಿಗೆ ಇಡಿ ಉರುಳು.. ಇತ್ತ HDKಗೂ ಎದುರಾಯ್ತು ಕಂಟಕ

21 ಸಿಬ್ಬಂದಿ ಸೇರಿದಂತೆ ಶೀಘ್ರಲಿಪಿಗಾರರು, ದಲಾಯತ್ ಗಳನ್ನು ಸಹ ವಾಪಸ್ ಮಾತೃ ಇಲಾಖೆಗೆ ಕಳುಹಿಸಲಾಗಿದೆ. ಓರ್ವ ಅಧೀನ ಕಾರ್ಯದರ್ಶಿ, ಇಬ್ಬರು ಶಾಖಾಧಿಕಾರಿಗಳು ಮತ್ತು ಐವರು ಹಿರಿಯ ಸಹಾಯಕರು ಕುಮಾರಸ್ವಾಮಿ ನಿಯೋಜನೆ ಮೇರೆಗೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಕುಮಾರಸ್ವಾಮಿ ಆಡಳಿತದಲ್ಲಿ ಜಾರಿಗೆ ತಂದಿರುವ ಕೆಲ ಯೋಜನೆಗಳನ್ನು ಬಿಎಸ್‌ವೈ ತನಿಖೆಗೆ ಆದೇಶಿಸಿದ್ದು, ಜೊತೆ.ಕೆಲ ಟೆಂಡರ್‌ಗಳನ್ನು ಸಹ ರದ್ದು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.