ಶುಕ್ರವಾರ ಸಚಿವ ಸಂಪುಟ ರಚನೆ ಸಾಧ್ಯತೆ| ಕೇಂದ್ರ ನಾಯಕತ್ವದ ಅಂತಿಮ ಸೂಚನೆ ಮೇರೆಗೆ ಸಂಪುಟ ರಚನೆ| ನಾಳೆ ದೆಹಲಿಗೆ ತೆರಳುತ್ತಿರುವ ಸಿಎಂ ಮತ್ತು ಹಿರಿಯ ನಾಯಕರು| 10 ರಿಂದ 15 ಮಂದಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಾಧ್ಯತೆ| ಸ್ಪೀಕರ್ ಸ್ಥಾನದ ಅಭ್ಯರ್ಥಿ ಸಹ ಅಂತಿಮ ಸಾಧ್ಯತೆ| ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ
ಬೆಂಗಳೂರು[ಜು.29]: ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪ. ಬಳಿಕ ಇಂದು ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಗೆದ್ದಿದ್ದರು. ಇದೇ ವೇಳೆ ಅಗತ್ಯ ಮಸೂದೆಗಳನ್ನು ಮಂಡಿಸಿ ಅಂಗೀಕಾರವನ್ನೂ ಪಡೆದಿದ್ದರು. ಈ ಎಲ್ಲಾ ಕಾರ್ಯಗಳು ಮುಗಿಯುತ್ತಿದ್ದಂತೆಯೇ ಶುಕ್ರವಾರದಂದು ಸಚಿವ ಸಂಪುಟ ರಚಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
"
ಹಾಗಾದ್ರೆ ಯಡಿಯೂರಪ್ಪ ಕ್ಯಾಬಿನೆಟ್ ನಲ್ಲಿ ಮಂತ್ರಿ ಸ್ಥಾನ ಯಾರಿಗೆಲ್ಲಾ ಸಿಗುತ್ತೆ? ಇಲ್ಲಿದೆ ಸಂಭಾವ್ಯರ ಪಟ್ಟಿ
ವಿಶ್ವಾಸಮತ ಗೆದ್ದ ಯಡಿಯೂರಪ್ಪ: ಧ್ವನಿಮತದ ಮೂಲಕ ಅಂಗೀಕಾರ
ಕೇಂದ್ರ ನಾಯಕತ್ವದ ಅಂತಿಮ ಸೂಚನೆ ಮೇರೆಗೆ ಸಂಪುಟ ರಚನೆ ಮಾಡಲು ರಾಜ್ಯ ಬಿಜೆಪಿ ಸಜ್ಜಾಗಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ಪಕ್ಷದ ಹಿರಿಯ ನಾಯಕರು ಈ ಸಂಬಂಧ ಮಾತನಾಡಲು ನಾಳೆ ಮಂಗಳವಾರ ದೆಹಲಿಗೆ ತೆರಳುತ್ತಿದ್ದು, 10 ರಿಂದ 14 ಮಂದಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ಸ್ಪೀಕರ್ ಸ್ಥಾನದ ಅಭ್ಯರ್ಥಿಯ ಹೆಸರೂ ಫೈನಲ್ ಆಗಲಿದೆ.
ಸಂಭಾವ್ಯ ಸಚಿವರ ಪಟ್ಟಿ
* ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ನಗರ
* ಜೆ.ಸಿ.ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ
* ಗೋವಿಂದ ಕಾರಜೋಳ, ಮುಧೋಳ
* ಆರ್.ಅಶೋಕ್, ಪದ್ಮನಾಭ ನಗರ
* ಶ್ರೀರಾಮುಲು, ಮೊಳಕಾಲ್ಮೂರು
* ಸುನೀಲ್ ಕುಮಾರ್, ಕಾರ್ಕಳ
* ಎಸ್.ಅಂಗಾರ, ಸುಳ್ಯ
* ಎಸ್.ಎ.ರಾಮದಾಸ್, ಕೃಷ್ಣರಾಜ
* ಕೋಟಾ ಶ್ರೀನಿವಾಸ್ ಪೂಜಾರಿ, ಪರಿಷತ್ ಸದಸ್ಯ
* ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ
* ಶಶಿಕಲಾ ಜೊಲ್ಲೆ, ನಿಪ್ಪಾಣಿ
* ಬಾಲಚಂದ್ರ ಜಾರಕಿಹೊಳಿ, ಅರಭಾವಿ
* ಉಮೇಶ್ ಕತ್ತಿ, ಹುಕ್ಕೇರಿ
* ರೇಣುಕಾಚಾರ್ಯ, ಹೊನ್ನಾಳಿ
