ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಬಿಎಸ್‌ವೈ ಒಂದೇ ವೇದಿಕೆ ಹಂಚಿಕೊಂಡರೂ ಒಬ್ಬರನ್ನೊಬ್ಬರು ನೋಡಿ ಒಂದೇ ಒಂದೂ ಮಾತನ್ನಾಡಲಿಲ್ಲ.
ಕುಂದಾಪುರ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಬಿಎಸ್ವೈ ಒಂದೇ ವೇದಿಕೆ ಹಂಚಿಕೊಂಡರೂ ಒಬ್ಬರನ್ನೊಬ್ಬರು ನೋಡಿ ಒಂದೇ ಒಂದೂ ಮಾತನ್ನಾಡಲಿಲ್ಲ.
ಬಿಎಸ್ವೈ ತಾವು ಭಾಷಣ ಮಾಡುವ ಸಂದರ್ಭದಲ್ಲಿ ನನ್ನ ಮಾತಿನ ಬಳಿಕ ಕೇಂದ್ರ ಸಚಿವ ಸದಾನಂದ ಗೌಡರು ಮಾತನಾಡಲಿದ್ದು, ಬಳಿಕ ಶೋಭಾ ಕರಂದ್ಲಾಜೆ ಮಾತನಾಡಲಿದ್ದಾರೆ ಎಂದು ಸೂಚಿಸಿ ತೆರಳಿದರು.
ಅನಂತಕುಮಾರ್ ಹೆಗಡೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಗುಲ್ಲೆಬ್ಬಿದೆ. ಈ ಹಿನ್ನೆಲೆಯಲ್ಲಿ ಬಿಎಸ್ವೈ ಮತ್ತು ಅನಂತಕುಮಾರ್ ಹೆಗಡೆ ನಡುವಿನ ಶೀತಲ ಸಮರಕ್ಕೆ ಅರ್ಥ ಬಂದಂತಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಧುರೀಣರೊಬ್ಬರು ಅಭಿಪ್ರಾಯಪಟ್ಟರು.
ಕುಂದಾಪುರ ಸಮಾವೇಶದ ಪ್ರಧಾನ ಭಾಷಣ ಮಾಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಟಿಪ್ಪು ಜಯಂತಿ ಆಚರಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಭಗವಾಧ್ವಜದಡಿ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ದೇಶದ್ರೋಹಿಗಳ ಮತವೇ ಬೇಕು. ಆದರೆ ಬಿಜೆಪಿಗೆ ದೇಶಭಕ್ತರ ವೋಟು ಬೇಕು ಎಂದು ಅಭಿಪ್ರಾಯಪಟ್ಟರು. ಬೈಂದೂರಿನಲ್ಲೂ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಭಸ್ಮಾಸುರ ಆಗಿದ್ದು ಅವರೇ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡುತ್ತಿದ್ದಾರೆ ಎಂದರು.
