ಒಂದು ಕಡೆ ವಿಜಯಪುರದಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗಿದರೆ, ಇನ್ನೊಂದೆಡೆ ಮಂಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಬಿಎಸ್ವೈ ಹರಿಹಾಯ್ದಿದ್ದಾರೆ.
ವಿಜಯಪುರ: ಒಂದು ಕಡೆ ವಿಜಯಪುರದಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗಿದರೆ, ಇನ್ನೊಂದೆಡೆ ಮಂಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಬಿಎಸ್ವೈ ಹರಿಹಾಯ್ದಿದ್ದಾರೆ.
ನಮ್ಮ ಕಾರ್ಯಕರ್ತರು ಹೆಣ್ಣು ಮಕ್ಕಳು ಇದ್ದ ಕಡೆಗೆ ವೇಣುಗೋಪಾಲ್ ನನ್ನು ಹೋಗಲು ಬಿಡಬಾರದು, ತಡೆ ಒಡ್ಡಬೇಕು ಎಂದು ಸುಳ್ಯದಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಯಡಿಯೂರಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ಒಬ್ಬ ಲಜ್ಜೆಗೆಟ್ಟ ಮುಖ್ಯಮಂತ್ರಿ, ಬಿಜೆಪಿ ಯಾತ್ರೆಗೆ ಜನರೇ ಸೇರುತ್ತಿಲ್ಲ ಅಂತಾರೆ, ಬಾರಪ್ಪ ನೀನು ಈ ಸಭೆಯನ್ನು ಒಮ್ಮೆ ನೋಡಿ ಹೋಗು, ಇದುವೇ ನಿನಗೆ ಉತ್ತರ, ಎಂದು ಯಡಿಯೂರಪ್ಪ ಹೇಳಿದ್ದಾರೆ.
ಈ ಜಿಲ್ಲೆಯ ಉಸ್ತುವಾರಿ ಸಚಿವ ಒಬ್ಬ ಬೇಜವಾಬ್ದಾರಿ ಮನುಷ್ಯ , ದಕ್ಷಿಣ ಕನ್ನಡ ಜಿಲ್ಲೆಯನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾನೆ. ನಮ್ಮ ಕಾರ್ಯಕರ್ತರು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಅಪರಾಧವಾಗುತ್ತದೆ., ಎಂದು ಹೇಳಿದ್ದಾರೆ.
