ಸಾಲಮನ್ನಾ ಬಗ್ಗೆ ಇಂದೇ ನಿರ್ಧಾರವಾಗಲಿ : ಬಿಎಸ್ ವೈ

First Published 25, May 2018, 11:26 AM IST
BS Yeddyurappa Slam Coalition Govt
Highlights

ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡು ಆಡಳಿತ ನಡೆಸಲು ಸಜ್ಜಾಗಿವೆ.  ಈ ವೇಳೆ ನಮ್ಮದು ಸಮ್ಮಿಶ್ರ ಸರ್ಕಾರವೆಂದು ರೈತರ ಸಾಲ ಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. 
 

ಬೆಂಗಳೂರು :  ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡು ಆಡಳಿತ ನಡೆಸಲು ಸಜ್ಜಾಗಿವೆ.  ಈ ವೇಳೆ ನಮ್ಮದು ಸಮ್ಮಿಶ್ರ ಸರ್ಕಾರವೆಂದು ರೈತರ ಸಾಲ ಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. 

ಅಲ್ಲದೇ  ಸಿಂಹದ ಮರಿಗಳಂತೆ ಘರ್ಜನೆ ಮಾಡುವ 104 ಶಾಸಕರು ನನ್ನ ಜೊತೆ ಸದನದಲ್ಲಿ ಕುಳಿತುಕೊಳ್ಳುತ್ತಾರೆ. ನಮ್ಮ ಹೋರಾಟ ನಿಶ್ಚಿತವಾಗಿ ನಡೆಯುತ್ತದೆ. ಸರ್ಕಾರವು ನೀಡಿದ ಸಾಲ ಮನ್ನಾ ಭರವಸೆಯನ್ನು ಈಡೇರಿಸಲೇಬೇಕು. 

ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದೇ ಸ್ಪಷ್ಟವಾಗಿ ತಿಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಿಯೇ ಮಾಡುತ್ತೇವೆ ಎಂದು ಬಿಎಸ್ ವೈ ಹೇಳಿದ್ದಾರೆ.  

ಅಲ್ಲದೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸದ್ಯ ಮೈತ್ರಿ ಸರ್ಕಾರವಿದ್ದು, ಕಾಂಗ್ರೆಸ್ ನ್ನು ಜೆಡಿಎಸ್ ಪಕ್ಷವೇ ಮುಗಿಸಲು ಹೊರಟಿದೆ. ಹೀಗಾಗಿ ಕಾಂಗ್ರೆಸ್ ಬಗ್ಗೆ ತಾವು ಮಾತನಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು. 

loader