ವಿಧಾನಸಭಾ ವಿರೋಧ ಪಕ್ಷದ ನಾಯಕ ಬಿ.ಎಸ್  ಯಡಿಯೂರಪ್ಪ  ಅವರಿಗೆ  ಇನ್ನಾದರೂ ಕೂಡ ನಿವೇಶನ ದೊರಕಿಲ್ಲ. ಸರ್ಕಾರಿ ನಿವಾಸಕ್ಕಾಗಿ ಕಳೆದ ಒಂದು ತಿಂಗಳ ಹಿಂದೆ ಮನವಿ ಮಾಡಿದ್ದರೂ ಕೂಡ ಇನ್ನಾದರೂ ಹಂಚಿಕೆಯಾಗಿಲ್ಲ. 

ಬೆಂಗಳೂರು : ವಿಧಾನಸಭಾ ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಅವರಿಗೆ ಇನ್ನಾದರೂ ಕೂಡ ಸರ್ಕಾರಿ ನಿವೇಶನ ಹಂಚಿಕೆಯಾಗಿಲ್ಲ. 

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ ನಂಬರ್ 2 ನಿವಾಸಕ್ಕಾಗಿ ಬಿಎಸ್ವೈ ಮನವಿ ಸಲ್ಲಿಸಿ ಒಂದು ತಿಂಗಳು ಕಳೆದಿದೆ. ಸಾರ್ವಜನಿಕರು, ಕಾರ್ಯಕರ್ತರ ಭೇಟಿಗೆ ಅನುಕೂಲವಾಗುವಂತೆ ಶೀಘ್ರ ರೇಸ್ ಕೋರ್ಸ್ ರಸ್ತೆಯ ನಿವಾಸ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮನವಿ‌ ಮಾಡಿದ್ದರು.

ಸಚಿವ ಸಂಪುಟ ವಿಸ್ತರಣೆಯಾದ ಕೂಡಲೇ ನಿವಾಸ ಹಂಚಿಕೆ ಮಾಡುವುದಾಗಿ ಭರವಸೆ ಕೊಟ್ಟಿದ್ದ ಡಿಪಿಎಆರ್ ಅಧಿಕಾರಿಗಳು ತಿಂಗಳು ಕಳೆದರೂ ಕೂಡ ನಿವಾಸ ಹಂಚಿಕೆ ಮಾಡುವತ್ತ ಗಮನ ಹರಿಸಿಲ್ಲ.

ಅವರು ಉಪಮುಖ್ಯಮಂತ್ರಿ, ಹಾಗೂ ಮುಖ್ಯಮಂತ್ರಿ ಆಗಿದ್ದ ವೇಳೆ ಅವರು ವಾಸವಿದ್ದ ವೇಳೆ ವಾಸವಿದ್ದ ನಿವಾಸವನ್ನೇ ನೀಡಬೇಕು ಎಂದು ಅವರು ಮನವಿ ಸಲ್ಲಿಸಿದ್ದಾರೆ.