ಶ್ರೀಕಂಠೇಶ್ವರನ ಮುಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ವೈ ಧ್ಯಾನದ ಮೊರೆ ಹೋದರು. 

ನಂಜನಗೂಡು [ಜೂ.18]: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಭಿಷೇಕ ಸಮಯಕ್ಕೆ ಆಗಮಿಸಿದ ಅವರು ಶ್ರೀಕಂಠೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ಶ್ರೀಕಂಠೇಶ್ವರನಿಗೆ ಅಭಿಷೇಕ ಸಲ್ಲಿಸಿ ಬಿಲ್ವಪತ್ರೆ, ಹೂವುಗಳನ್ನು ಸಮರ್ಪಿಸಿದರು. ಸುಮಾರು 25 ನಿಮಿಷಗಳ ಕಾಲ ಶಾಂತವಾಗಿ ದೇವರ ಮುಂದೆ ಕುಳಿತು ಧ್ಯಾನದಲ್ಲಿ ಮಗ್ನರಾಗಿ ವರ ಬೇಡಿದರು. 

ನಂತರ ದೇಗುಲದ ಅರ್ಚಕರು ಪ್ರಸಾದ ನೀಡಿ ಶುಭ ಹಾರೈಸಿದರು. ದೇವಾಲಯದ ವತಿಯಿಂದ ಅವರಿಗೆ ಫಲತಾಂಬೂಲ ವಸ್ತ್ರಗಳನ್ನು ನೀಡಿ ಗೌರವಿಸಲಾಯಿತು.