ರಾಜ್ಯದಲ್ಲಿ  ಮತ್ತೆ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಬೇಕು ಎಂದು ಸತತ ಪ್ರಯತ್ನ ಮಾಡುತ್ತಿರುವ ಬಿಎಸ್ ವೈ ಇದೀಗ ಮಹಾಯಾಗವೊಂದನ್ನು ನಡೆಸಿದ್ದಾರೆ. ಉಡುಪಿಯ ಆನೆಗೊಂದಿ ಮಠದಲ್ಲಿ ಯಾವನ್ನು ರಹಸ್ಯವಾಗಿ ನಡೆಸಿದ್ದಾರೆ. 

ಉಡುಪಿ: ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಅಭಿಲಾಷೆ ಹೊಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಉಡುಪಿಯ ಕಾಪು ತಾಲೂಕಿನ ಕುತ್ಯಾರು ಗ್ರಾಮದ ಆನೆಗೊಂದಿ ಮಠದಲ್ಲಿ ಅತ್ಯಂತ ಗೌಪ್ಯವಾಗಿ ಭಾನುವಾರ ಮತ್ತು ಸೋಮವಾರ ಎರಡು ಯಾಗಗಳನ್ನು ನಡೆಸಿದ್ದಾರೆ. 

Add Asianetnews Kannada as a Preferred SourcegooglePreferred

ಇದರ ಜೊತೆಗೆ ಮುಂಬರುವ ಚಂದ್ರಗ್ರಹಣ ದಿಂದ ಯಾವುದೇ ದೋಷ ಸಂಭವಿಸದಂತೆಯೂ ಪ್ರಾರ್ಥನೆ ಸಲ್ಲಿಸಿದ್ದಾರೆ. ದ.ಕ. ಜಿಲ್ಲೆಯ ಪುತ್ತೂರಿನ ಕೃಷ್ಣ ಉಪಾಧ್ಯಾಯ ನೇತೃತ್ವದಲ್ಲಿ ಸುಮಾರು 100 ಮಂದಿ ಪುರೋಹಿತರು ಈ ಶತಚಂಡಿಕಾಯಾಗ ಮತ್ತು ಮಹಾರುದ್ರ ಯಾಗವನ್ನು ನೆರವೇರಿಸಿದ್ದಾರೆ. 

ಖುದ್ದು ಯಡಿಯೂರಪ್ಪ ಮತ್ತು ಅವರ ಮಕ್ಕಳಾದ ಬಿ.ವೈ.ರಾಘವೇಂದ್ರ ಮತ್ತು ವಿಜಯೇಂದ್ರ ಅವರು ಎರಡು ದಿನವೂ ಈ ಯಾಗಗಳಲ್ಲಿ ಭಾಗವಹಿಸಿದ್ದರು. ಶತಚಂಡಿಕಾಯಾಗ ಮಾಡಿ ಸಲ್ಲಿಸುವ ಪ್ರಾರ್ಥನೆ ನೆರವೇರುತ್ತದೆ ಎನ್ನುವ 100 ಅರ್ಚಕರಿಂದ ಪೂಜಾ ಕೈಂಕರ್ಯ | ಬಿಜೆಪಿಗರಿಗೂ ಮಾಹಿತಿ ಇಲ್ಲ ನಂಬಿಕೆ ಇರುವುದರಿಂದ ಬಿ.ಎಸ್.ಯಡಿಯೂರಪ್ಪ ಅವರು ಈ ಯಾಗವನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಯಾಗಗಳು ಎಷ್ಟು ಗೌಪ್ಯವಾಗಿದ್ದವು ಎಂದರೆ ಉಡುಪಿ ಜಿಲ್ಲೆಯ ಬಿಜೆಪಿ ನಾಯಕರಿಗೂ ಈ ಕುರಿತು ಸಣ್ಣ ಮಾಹಿತಿಯೂ ಇರಲಿಲ್ಲ!