ಬಿಎಸ್’ವೈ ಎಂ.ಬಿ. ಪಾಟೀಲ್ ಟ್ವಿಟರ್ ವಾರ್
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರ ‘ರೈತರ ಪಾಲಿಗೆ ನೀರಾವರಿ ಸಚಿವರು ಬದುಕಿದ್ದೂ ಸತ್ತಂತಾಗಿದೆ’ ಎಂಬ ಟೀಕೆಗೆ ನೀರಾವರಿ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ನನ್ನ ಕನಸಿನ ಯೋಜನೆಯಾದ ಕೆರೆ ತುಂಬುವ ಯೋಜನೆಯ ಪರಿಕಲ್ಪನೆ ಕಂಡು ತಾವು 2009 ರಲ್ಲಿ ಈ ಯೋಜನೆ ರಾಷ್ಟ್ರಕ್ಕೇ ಮಾದರಿ ಎಂದು ಹೇಳಿದ್ದು ನೆನಪಿಲ್ಲವೇ? ಹೀಗೇಕೆ ಸದಾ ಬಣ್ಣ ಬದಲಾಯಿಸುತ್ತೀರಿ? ಎಂದು ಎಂ.ಬಿ. ಪಾಟೀಲ್ ಟ್ವೀಟಿಸಿದ್ದಾರೆ.
ಮುಂದುವರೆದು, ಹಿರಿಯರಾದ ನಿಮಗೆ ಅರಳು-ಮರಳು ಆಗುತ್ತಿದೆ. ನಾನು ನಿಮ್ಮ ಬಗ್ಗೆ ಮಾತನಾಡುವುದಿರಲಿ, ನಿಮ್ಮದೇ ಪಕ್ಷದವರು ನಿಮ್ಮ ಬಗ್ಗೆ ಹೇಳಿರುವುದನ್ನು ನೋಡಿ ಎಂದು ಸರಣಿ ಟ್ವೀಟ್’ಗಳನ್ನು ಮಾಡಿದ್ದಾರೆ..
ನಿನ್ನೆ ವಿಜಯಪುರದಲ್ಲಿ ಪರಿವರ್ತನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ನೀರಾವರಿ ಸಚಿವ ಎಂ.ಬಿ. ಪಾಟೀಲರು ಈ ಭಾಗದವರೇ ಆಗಿದ್ದರೂ ಯೋಜನೆಯ ಬಗ್ಗೆ ಆಸಕ್ತಿ ತೋರಲಿಲ್ಲ. ರೈತರ ಪಾಲಿಗೆ ನೀರಾವರಿ ಸಚಿವರು ಬದುಕಿದ್ದೂ ಸತ್ತಂತಾಗಿದೆ. ಕೆಲಸ ಮಾಡುವುದು ಬಿಟ್ಟು ನನ್ನ ಹಗರಣ ಬಯಲು ಮಾಡುತ್ತೇನೆ ಎಂದು ಪೊಳ್ಳು ಸವಾಲು ಹಾಕಿಕೊಂಡು ಓಡಾಡುತ್ತಾರೆ, ಎಂದು ಟೀಕಿಸಿದ್ದರು.
