ತನ್ನ ಸಹೋದರನಿಗೆ ಸರ್ಕಾರಿ ಕೆಲಸ ಸಿಕ್ಕಿತು ಎಂಬ ಖುಷಿಯಲ್ಲಿ ನೆರೆಹೊರೆಯವರಿಗೆ ಸಿಹಿ ಹಂಚುವ, ಸ್ನೇಹಿತರಿಗೆ ಪಾರ್ಟಿ ಕೊಡಿಸುವವರ ಬಗ್ಗೆ ಕೇಳಿದ್ದೇವೆ. ಆದರೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಮಖಾನ್‌ ಎಂಬ ಅಣ್ಣನೊಬ್ಬ ತನ್ನ ಸೋದರ ಸರ್ಕಾರಿ ಕೆಲಸ ಪಡೆದುಕೊಂಡಿದ್ದಕ್ಕೆ ಅಸೂಯೆ ತಾಳಲಾರದೆ ಇಡೀ ಮನೆಗೆ ಬೆಂಕಿ ಇಟ್ಟು ದ್ವೇಷ ಕಾರಿದ್ದಾನೆ.

ಈ ಘಟನೆಯಲ್ಲಿ ಸರ್ಕಾರಿ ಉದ್ಯೋಗ ಸಿಕ್ಕ ಖುಷಿಯಲ್ಲಿದ್ದ ಮಖಾನ್‌ನ ಸೋದರ ಗೋವಿಂದ, ಮತ್ತೊಬ್ಬ ಸೋದರ ಬಿಕಾಸ್‌, ಇಬ್ಬರು ಹೆಣ್ಣುಮಕ್ಕಳು ಕೂಡ ಕರಕಲಾಗಿದ್ದಾರೆ. ಈ ಸಹೋದರರು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ತಂದೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸೋದರ ಪೈಕಿ ಗೋವಿಂದನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ದೊರಕಿತು. ಇದೇ ಸಿಟ್ಟಿನಲ್ಲಿ ಮಖಾನ್‌ ಮನೆಗೆ ಬೆಂಕಿ ಹಚ್ಚಿದ್ದಾನೆ.