ಅಳತೆ ಮೀರಿ ಕುಡಿದು ಇಹಲೋಕ ತ್ಯಜಿಸಿದ ಮಹಿಳೆ

First Published 15, Jun 2018, 11:38 AM IST
British tourist killed by alcohol poisoning at Canary Islands
Highlights

ಒಳಗೆ ಸೇರಿದರೆ ಗುಂಡು.. ಹುಡುಗಿಯಾಗುವಳು ಗಂಡು ... ಮಾಲಾಶ್ರೀ ಅಭಿನಯದ ಹಾಡು ನೋಡದವರೇ ಇಲ್ಲ. ಆದರೆ ಇಲ್ಲೊಬ್ಬ ಮಹಿಳೆ ಕಂಠ ಪೂರ್ತಿ ಕುಡಿದು ತನ್ನ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದಾಳೆ. ಯರ್ರಾ ಬಿರ್ರಿ ಎಣ್ಣೆ ಹೀರಿದವಳು ಅಮಲಿನಲ್ಲಿಯೇ ಬಾರದ ಲೋಕಕ್ಕೆ ತೆರಳಿದ್ದಾಳೆ.

ಆಂಟಿಗುವಾ ಜೂನ್ 15: ಒಳಗೆ ಸೇರಿದರೆ ಗುಂಡು.. ಹುಡುಗಿಯಾಗುವಳು ಗಂಡು ... ಮಾಲಾಶ್ರೀ ಅಭಿನಯದ ಹಾಡು ನೋಡದವರೇ ಇಲ್ಲ. ಆದರೆ ಇಲ್ಲೊಬ್ಬ ಮಹಿಳೆ ಕಂಠ ಪೂರ್ತಿ ಕುಡಿದು ತನ್ನ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದಾಳೆ. ಯರ್ರಾ-ಬಿರ್ರಿ ಎಣ್ಣೆ ಹೀರಿದವಳು ಅಮಲಿನಲ್ಲಿಯೇ ಬಾರದ ಲೋಕಕ್ಕೆ ತೆರಳಿದ್ದಾಳೆ.

ಕ್ಯಾನರಿ ದ್ವೀಪದಲ್ಲಿ ರಜಾ ದಿನ ಕಳೆಯಲು ಗಂಡನೊಂದಿಗೆ ತೆರಳಿದ್ದ ಪೌಲಾ ಬಿಷಪ್ ಎಣ್ಣೆ ಎಟಿಗೆ ಪ್ರಾಣ ಕಳೆದುಕೊಂಡಿದ್ದಾಳೆ. ಅಂಟಿಗುವಾದದ ರೆಸ್ಟೋರೆಂಟ್ ವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ನಂತರ ಪರೀಕ್ಷೆ ಮಾಡಿದಾಗ ರಕ್ತದಲ್ಲಿ 8 ಪಟ್ಟು ಅಧಿಕ ಆಲ್ಕೋಹಾಲ್ ಅಂಶ ಇರುವುದನ್ನು ಕಂಡು ತನಿಖಾಧಿಕಾರಿಗಳೆ ಹೌಹಾರಿದ್ದಾರೆ.

ಎಣ್ಣೆ, ಡ್ರಗ್ಸ್, ಸೆಕ್ಸ್: ಮಾಡೆಲ್ ಖಲಾಸ್..!

ಕೆಲವು ಬೀರ್ ಬಾಟಲಿಗಳು ಅದು ಸಾಕಾಗಿಲ್ಲ ಎಂದು ಮತ್ತೊಂದಿಷ್ಟು ವೈನ್ ಗಂಟಲಿಗೆ ಹೊಯ್ದುಕೊಂಡ ಬಿಷಪ್ ಮಲಗುವ ಮುನ್ನ ಒಂದಿಷ್ಟು ಕಾಫಿಯನ್ನು ಸೇವಿಸಿದ್ದಳು ಎಂದು ಆಕೆಯ ಗಂಡ ಸ್ಟುವರ್ಟ್ ಪೊಲೀಸರ ಎದುರು ಹೇಳಿಕೆ  ನೀಡಿದ್ದಾರೆ.

ಆಕೆ ಕುಡಿದ ಕಾಕ್ ಟೈಲ್ ದೇಹದೊಳಗೆ ಹೋದ ನಂತರ ವಿಷವಾಗಿ ಮಾರ್ಪಟ್ಟಿದ್ದು ಸಾವಿಗೆ ಕಾರಣವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. 

 

loader