ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನಿ ಎಂದರೆ ಜೈಲು ಶಿಕ್ಷೆ..!

First Published 8, Feb 2018, 8:46 AM IST
Bring law to punish those who call Indian Muslims Pakistani says Owaisi
Highlights

ಭಾರತೀಯ ಮುಸ್ಲಿಮರನ್ನು ‘ಪಾಕಿಸ್ತಾನಿ’ ಎಂದು ಜರೆಯುವ ಯಾವುದೇ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ತರಬೇಕು ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಒತ್ತಾಯಿಸಿದ್ದಾರೆ.

ನವದೆಹಲಿ: ಭಾರತೀಯ ಮುಸ್ಲಿಮರನ್ನು ‘ಪಾಕಿಸ್ತಾನಿ’ ಎಂದು ಜರೆಯುವ ಯಾವುದೇ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ತರಬೇಕು ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಒತ್ತಾಯಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಒವೈಸಿ, ತಮ್ಮ ಬೇಡಿಕೆ ಬಗ್ಗೆ ಸರ್ಕಾರ ಕಿವಿಗೊಡುವುದಿಲ್ಲ ಮತ್ತು ಅಂತಹ ಮಸೂದೆ ತರುವುದಿಲ್ಲ ಎಂದೂ ಗೊತ್ತಿದೆ ಎಂದೂ ತಿಳಿಸಿದರು.

ಭಾರತದ ಮುಸ್ಲಿಮರು ಜಿನ್ನಾರ ಎರಡು ರಾಷ್ಟ್ರ ನೀತಿಯನ್ನು ತಿರಸ್ಕರಿಸಿದ್ದಾರೆ ಎಂದೂ ಒವೈಸಿ ಹೇಳಿದರು. ಈ ನಡುವೆ, ಮುಸ್ಲಿಮರು ಪಾಕ್‌ಗೆ ಅಥವಾ ಬಾಂಗ್ಲಾಗೆ ಹೋಗಲಿ ಎಂದು ಬಿಜೆಪಿ ಸಂಸದ ವಿನಯ ಕಟಿಯಾರ್ ಅವರು ಒವೈಸಿಗೆ ತಿರುಗೇಟು ನೀಡಿದ್ದಾರೆ.

loader