ರಾಯಣ್ಣ ಬ್ರಿಗೇಡ್ ವಿಚಾರಕ್ಕೆ ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಸಮರ ಮುಂದುವರೆದಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಈಶ್ವರಪ್ಪ ಭಾಗವಹಿಸಿ ಬಿಎಸ್ವೈಗೆ ಮತ್ತೆ ಸಡ್ಡು ಹೊಡೆದಿದ್ದಾರೆ.
ಬೆಂಗಳೂರು (ಮಾ.04): ರಾಯಣ್ಣ ಬ್ರಿಗೇಡ್ ವಿಚಾರಕ್ಕೆ ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಸಮರ ಮುಂದುವರೆದಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಈಶ್ವರಪ್ಪ ಭಾಗವಹಿಸಿ ಬಿಎಸ್ವೈಗೆ ಮತ್ತೆ ಸಡ್ಡು ಹೊಡೆದಿದ್ದಾರೆ.
ಆನಂದ ರಾವ್ ವೃತ್ತದಲ್ಲಿನ ಕೆಇಬಿ ಎಂಜಿನಿಯರಿಂಗ್ ಅಸೋಶಿಯೇಶನ್ ಸಭಾಂಗಣದಲ್ಲಿ ಬ್ರಿಗೇಡ್ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಕೆ. ಮುಕುಡಪ್ಪ, ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶ್ ಮೂರ್ತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಈಶ್ವರಪ್ಪ ಕೂಡಾ ಭಾಗಿಯಾದರು. ವೆಂಕಟೇಶಮೂರ್ತಿ ಅಮಾನತು ವಾಪಸ್ ಪಡೆಯದಿರುವುದು. ಸೊಗಡು ಶಿವಣ್ಣ, ನಂದೀಶ್‌ಗೆ ನೀಡಿರುವ ನೋಟಿಸ್ ಹಿಂಪಡೆಯದಿರುವುದಿಂದ ಈಶ್ವರಪ್ಪ ಅಸಮಾಧಾನಗೊಂಡಿದ್ದು, ಮತ್ತೊಮ್ಮೆ ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಲಹೆಯಂತೆ ಪಕ್ಷದ ಹಿಂದುಳಿದ ಮೋರ್ಚಾಗಳ ಸಂಚಾಲಕ ಸ್ಥಾನ ಒಪ್ಪಿಕೊಂಡು ಪಕ್ಷದ ಚಟುವಟಿಕೆಯಲ್ಲಿ ತೊಡಗಿದ್ದೇನೆ. ಆದರೆ ಶಾ ಸೂಚನೆಯಂತೆ ಯಡಿಯೂರಪ್ಪ ನಡೆದುಕೊಳ್ಳುತ್ತಿಲ್ಲ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
