ಸಾವಿರಾರು ಚಿತ್ರಗಳಿಗೆ ಕಂಠದಾನ ಮಾಡಿದ್ದ ಜನುಮದಜೋಡಿ ಖ್ಯಾತಿಯ ಎಲ್.ಎನ್.ಶಾಸ್ತ್ರಿ ಇನ್ನು ನೆನಪು ಮಾತ್ರ. ಬಾರದ ಲೋಕಕ್ಕೆ ಹಾರಿ ಹೋಗಿರುವ ‘ಜೋಡಿ ಹಕ್ಕಿ' ಬಗ್ಗೆ ನೀವು ತಿಳಿದಿರಬೇಕಾದ ವಿಷಯಗಳಿವು:
ಬೆಂಗಳೂರು: ಸಾವಿರಾರು ಚಿತ್ರಗಳಿಗೆ ಕಂಠದಾನ ಮಾಡಿದ್ದ ಜನುಮದಜೋಡಿ ಖ್ಯಾತಿಯ ಎಲ್.ಎನ್.ಶಾಸ್ತ್ರಿ ಇನ್ನು ನೆನಪು ಮಾತ್ರ. ಬಾರದ ಲೋಕಕ್ಕೆ ಹಾರಿ ಹೋಗಿರುವ ‘ಜೋಡಿ ಹಕ್ಕಿ' ಬಗ್ಗೆ ನೀವು ತಿಳಿದಿರಬೇಕಾದ ವಿಷಯಗಳಿವು:
- ನಿನ್ನೆಯಷ್ಟೇ (ಜ.ದಿ- ಆ.29, 1971) ಶಾಸ್ತ್ರಿಯವರ ಹುಟ್ಟುಹಬ್ಬವಾಗಿತ್ತು. ಮರುದಿನವೇ ಕೊನೆಯುಸಿರೆಳೆದಿದ್ದಾರೆ
- 1996 ರಲ್ಲಿಮೊದಲ ಚಿತ್ರ ಅಜಗಜಾಂತರ ಮೂಲಕ ಗಾಯನ ಪ್ರಾರಂಭಿಸಿದ್ದ ಶಾಸ್ತ್ರಿ
- 1996 ರಲ್ಲಿ ಜನುಮದ ಜೋಡಿಯ ‘ಕೋಲುಮಂಡೆ ಜಂಗಮದೇವ’ ಹಾಡಿಗೆ ರಾಜ್ಯ ಪ್ರಶಸ್ತಿ
- 1998 ಕನಸಲೂ ನೀನೆ ಮನಸಲೂ ನೀನೆ ಹಾಡಿಗೆ ಮೊದಲು ಸಂಗೀತ ನಿರ್ದೇಶನ
- 3000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ‘ಕೋಗಿಲೆ’ ಶಾಸ್ತ್ರಿ
- ಶಿವರಾಜ್ ಕುಮಾರ್ ಅಭಿನಯದ "ಜನುಮದ ಜೋಡಿ" ಚಿತ್ರದ "ಕೋಲು ಮಂಡೆ ಜಂಗಮ ದೇವಾ, ಮಲ್ಲ ಚಿತ್ರದ 'ಕರುನಾಡೆ, ಶ್ 'ಅವನಲ್ಲಿ, ಇವಳಲ್ಲಿ, 'ಎ' ಚಿತ್ರದ ಚಾಂದಿನಿ, 'ಇಳಕೊಳ್ಳೋಕ್ಕೆ ಒಂದು ಊರು' ಹಾಗೂ ಇತ್ತೀಚಿನ ಅಧ್ಯಕ್ಷ ಚಿತ್ರದ ' ಅಧ್ಯಕ್ಷ ಅಧ್ಯಕ್ಷ' ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು.
