ಮೊದಲ ರಾತ್ರಿಯಂದು ಗಂಡನೊಂದಿಗೆ ಸವಿಗಳಿಗೆಯನ್ನು ಕಳೆಯಬೇಕಿದ್ದ ಪತ್ನಿಯೋರ್ವಳು ಅಂದೇ ಗಂಡನಿಗೆ  ಶಾಕ್ ನೀಡಿದ್ದಾಳೆ. ಆಕೆ ಮಾಡಿದ್ದೇನು ಗೊತ್ತೇ..?

ಪಾಟ್ನಾ : ಮೊದಲ ರಾತ್ರಿ ಎನ್ನುವುದು ಪ್ರತೀ ದಂಪತಿಗೂ ಕೂಡ ಜೀವನದಲ್ಲಿ ಮರೆಯಲಾರದ ಗಳಿಗೆಯಾಗಿರುತ್ತದೆ. 

ಅದರಂತೆ ಇಲ್ಲೋರ್ವ ವರನ ಪಾಲಿಗೂ ಕೂಡ ಮೊದಲ ರಾತ್ರಿ ಎನ್ನುವುದು ಎಂದಿಗೂ ಮರೆಯದ ದಿನವಾಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. 

ಮದುವೆಯಾದ ಮೊದಲ ರಾತ್ರಿಯ ವಧು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನೆಲ್ಲಾ ದೋಚಿಕೊಂಡು ಪರಾರಿಯಾಗಿದ್ದಾಳೆ. 

ಪಂಕಜ್ ಕುಮಾರ್ ಅವರು ಸಂಗೀತಾ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಇತ್ತ ಮೊದಲ ರಾತ್ರಿಗೆ ತಯಾರಿ ಮಾಡಿದ್ದು, ಈ ವೇಳೆ ಆಕೆ ಗಂಡನ ಕೋಣೆಗೆ ತೆರಳದೇ ಬೇರೆಡೆ ನಿದ್ರಿಸುವ ನೆಪ ಮಾಡಿ ಸಂಬಂಧಿಗಳು ನೀಡಿದ್ದ ಉಡುಗೊರೆಗಳನ್ನೆಲ್ಲಾ ದೋಚಿಕೊಂಡು ಪರಾರಿಯಾಗಿದ್ದಾಳೆ.

ಈ ಸಂಬಂಧ ಇದೀಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.