ಮದುವೆಗೆ ಕೆಲ ಗಂಟೆ ಮುನ್ನ ತಂದೆಯಿಂದಲೇ ವಧು ಹತ್ಯೆ!

First Published 24, Mar 2018, 9:07 AM IST
Bride died by her father
Highlights

ಮಗಳ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ತಂದೆಯೇ ಮಗಳನ್ನು ಕೊಂದ ದಾರುಣ ಘಟನೆ ಗುರುವಾರ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

ಮಲಪ್ಪುರಂ (ಮಾ.24): ಮಗಳ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ತಂದೆಯೇ ಮಗಳನ್ನು ಕೊಂದ ದಾರುಣ ಘಟನೆ ಗುರುವಾರ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

ಅತಿರಾ (22) ಕೊಲೆಯಾದ ಯುವತಿ. ಈಕೆ ಮದುವೆಯಾಗಬೇಕಿದ್ದ ಹುಡುಗ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಬೇರೆ ಜಾತಿಯವನಾಗಿದ್ದ. ಈ ಕಾರಣಕ್ಕಾಗಿ ಮದುವೆಗೆ ತಂದೆ ವಿರೋಧ ವ್ಯಕ್ತಪಡಿಸಿ ಅನಂತರ ಒಪ್ಪಿಕೊಂಡಿದ್ದು, ಶುಕ್ರವಾರ ವಿವಾಹ ನಿಗದಿಯಾಗಿತ್ತು. ಆದರೆ ಗುರುವಾರ ಈ ವಿಚಾರವಾಗಿ ತಂದೆ- ಮಗಳ ನಡುವೆ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದಾಗ ಮಗಳಿಗೆ ತಂದೆ ಹಲವು ಬಾರಿ ಚಾಕುವಿನಲ್ಲಿ ಇರಿದಿದ್ದಾರೆ. ಕುಸಿದು ಬಿದ್ದ ಅತಿರಾಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗಾಗಲೇ ಆಕೆ ಮೃತಪಟ್ಟಿದ್ದಳು ಎಂದು ವರದಿಯಾಗಿದೆ. ಇದೀಗ ತಂದೆಯನ್ನು ಕೊಲೆ ಆರೋಪದ ಮೇಲೆ ಮಲಪ್ಪುರಂ ಜಿಲ್ಲಾ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

loader