ಸಪ್ತಪದಿ ತುಳಿಯಬೇಕಿದ್ದ ವಧು-ವರರಿಬ್ಬರೂ ಮಸಣಕ್ಕೆ; ಸಂಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲೀಗ ಸೂತಕದ ಛಾಯೆ

news | Wednesday, January 24th, 2018
Suvarna Web Desk
Highlights

ವಿವಾಹ ಪೂರ್ವ ಫೋಟೋ ಶೂಟ್'ಗೆ ತೆರಳುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು, ಭೀಕರ ರಸ್ತೆ ಅಪಘಾತದಲ್ಲಿ ವಧು ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ವರ ಕೂಡಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಹಸೆಮಣೆ ಏರಬೇಕಾಗಿದ್ದ ವಧು ವರರಿಬ್ಬರೂ ಮಸಣ ಸೇರಿದ್ದಾರೆ. ಸಂಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲೀಗ ಸೂತಕದ  ಛಾಯೆ ಆವರಿಸಿದೆ.

ಹಾಸನ (ಜ.24): ವಿವಾಹ ಪೂರ್ವ ಫೋಟೋ ಶೂಟ್'ಗೆ ತೆರಳುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು, ಭೀಕರ ರಸ್ತೆ ಅಪಘಾತದಲ್ಲಿ ವಧು ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ವರ ಕೂಡಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಹಸೆಮಣೆ ಏರಬೇಕಾಗಿದ್ದ ವಧು ವರರಿಬ್ಬರೂ ಮಸಣ ಸೇರಿದ್ದಾರೆ. ಸಂಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.

ತುಮಕೂರು ಜಿಲ್ಲೆ ಗುಬ್ಬಿಯ ರಾಧಿಕಾ- ಸುಪ್ರೀತ್ ನಡುವೆ ವಿವಾಹ ನಿಶ್ಚಯಗೊಂಡಿತ್ತು. ಇವರಿಬ್ಬರೂ  ಫೋಟೋ ಶೂಟನ್ನು ಹಾಸನದ ಶೆಟ್ಟಿಹಳ್ಳಿ ಚರ್ಚ್'ನಲ್ಲಿ ಮುಗಿಸಿ ಮಂಜ್ರಾಬಾದ್ ಕೋರ್ಟ್ ಕಡೆ ತೆರಳುತ್ತಿದ್ದರು. ಈ ವೇಳೆ ಆಲೂರಿನ ಪಾಳ್ಯದಲ್ಲಿ ಅಸ್ವಸ್ಥ ಮಹಿಳೆಗೆ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪಾದಚಾರಿ ಅಸ್ವಸ್ಥ ಮಹಿಳೆ ಸಾವನ್ನಪ್ಪಿದ್ದಾಳೆ. ಕಾರಿನಲ್ಲಿದ್ದ ರಾಧಿಕಾ ಸಹ ಸಾವನ್ನಪ್ಪಿದ್ದು, ರಾಧಿಕಾ ತಾಯಿ, ಕ್ಯಾಮರಾಮನ್'ಗಳು ಸೇರಿ ಮೂವರ ಸ್ಥಿತಿ ಗಂಭೀರವಾಗಿತ್ತು.

Comments 0
Add Comment

  Related Posts

  Hasan BJP Politics

  video | Friday, April 6th, 2018

  Hasan BJP Politics

  video | Friday, April 6th, 2018

  Car Catches Fire

  video | Thursday, April 5th, 2018

  Karnataka Elections India Today Pre Poll Survey Part-3

  video | Friday, April 13th, 2018
  Suvarna Web Desk