ಸುವರ್ಣ ನ್ಯೂಸ್ ಇವತ್ತು ಪ್ರಭಾವಿ ಅಧಿಕಾರಿಯ ಬಂಡವಾಳ ಬಯಲು ಮಾಡಿದೆ. ಪ್ರಭಾವಿಯಾಗಿ ಡೀಲ್ ಮಾಸ್ಟರ್ ಎಂದೇ ಕುಖ್ಯಾತಿಯಾಗಿದ್ದ ಆ ಅಧಿಕಾರಿಯ ಭ್ರಷ್ಟಾಚಾರ ಮುಖ ಕಳಚಿಬಿದ್ದಿದೆ.

ಬೆಂಗಳೂರು, [ಅ.12]: ಡೀಲ್ ಮಾಸ್ಟರ್ ಎಂದೇ ಕುಖ್ಯಾತಿಯಾಗಿದ್ದ ಕೆಪಿಎಸ್ಸಿ ಅಧ್ಯಕ್ಷರಾದ ಶ್ಯಾಮ್ ಭಟ್ ಅವರ ಮತ್ತೊಂದು ಭ್ರಷ್ಟಾಚಾರ ಮುಖ ಕಳಚಿಬಿದ್ದಿದೆ. ಲಂಚ ಪರಾಕ್ರಮದ ಬಗ್ಗೆ ಸುವರ್ಣ ನ್ಯೂಸ್ ಎಕ್ಸ್ ಕ್ಲೂಸಿವ್ ಆಗಿ ಸುದ್ದಿ ಪ್ರಸಾರ ಮಾಡಿದೆ. 

Add Asianetnews Kannada as a Preferred SourcegooglePreferred

ಬಿಡಿಎನಲ್ಲಿ 2012ರಿಂದ 2016ರವರೆಗೂ ಆಯುಕ್ತರಾಗಿ ಕುಳಿತಿದ್ದ ಟಿ.ಶ್ಯಾಮ್ ಭಟ್ ಫೈಲ್ ಗಳನ್ನು ಕ್ಲಿಯರ್ ಮಾಡಲು ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಆ ವಿಡಿಯೋ ಇದೀಗ ಬಟಾಬಯಲಾಗಿದೆ.

100 ಫೈಲ್ ಗಳಿದ್ದು, ಒಂದು ಫೈಲ್ ಕ್ಲಿಯರ್ ಮಾಡಲು ತಲಾ ಒಂದಕ್ಕೆ 2 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಅಂದರೆ. ಒಟ್ಟು 100 ಫೈಲ್ ಗಳಿಗೆ 2 ಕೋಟಿ ರೂಪಾಯಿಗೆ ಡೀಲ್ ಕುದಿರಿಸಿದ್ದಾರೆ.

ಶ್ಯಾಮ್ ಭಟ್ ಅವರು ತಮ್ಮ ಚೇಂಬರ್ ನಲ್ಲೇ BDA ಬ್ರೋಕರ್ ನನ್ನು ಕೂರಿಸಿಕೊಂಡು ಡೀಲ್ ಮಾಡಿದ್ದಾರೆ. ಬಿಡಿಎನಲ್ಲಿ 2012ರಿಂದ 2016ರವರೆಗೂ ಆಯುಕ್ತರಾಗಿ ಕುಳಿತಿದ್ದ ಟಿ.ಶ್ಯಾಮ್ ಭಟ್ ವೇಳೆ ಅದೆಷ್ಟೋ ಬಿಡಿಎ ಬಡಾವಣೆಗಳ ಜಮೀನು ಡಿ ನೋಟಿಫಿಕೇಷನ್ ಕೇಸಲ್ಲಿ ಇವರ ಪಾತ್ರವಿದೆ. 

 ಆದರೆ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಬಚಾವ್ ಆಗಿದ್ದಾರೆ. ಇದೀಗ ಬಿಡಿಎ ಬ್ರೋಕರ್ ಒಬ್ಬರು ಇದೇ ಶ್ಯಾಮ್ ಭಟ್ ಆಯುಕ್ತರಾಗಿದ್ದಾಗ ನಡೆಸಿದ್ದ ಡೀಲಿಂಗ್ ಬಯಲು ಮಾಡಿದ್ದಾರೆ.

 ಶ್ಯಾಮ್ ಭಟ್ ಅವರ ಡೀಲಿಂಗ್ ಬಗ್ಗೆ ಜೆಡಿಎಸ್ ವಕ್ತಾರ ಪ್ರೊ.ಸಿ.ಎಸ್.ಸಿದ್ದರಾಜು ಎಸಿಬಿಗೆ ದೂರು ನೀಡಿದ್ದಾರೆ.

"