ನಾವು ನಮ್ಮ ಮೇಲಿನ ಅಧಿಕಾರಿಗಳಿಗೂ ಹಣ ನೀಡಬೇಕು, ಒಂದು ರೂಪಾಯಿ ಕಡಿಮೆ ಕೊಟ್ರೂ ತೆಗೆದುಕೊಳ್ಳಲ್ಲ ಎಂದು ಒತ್ತಡ ಹಾಕಿ ಹಣ ವಸೂಲಿ ಮಾಡಿದ್ದಾರೆ

ಅಕ್ರಮ ದಂಧೆಗಳಿಗೆ ಪೊಲೀಸರೇ ಸಾಥ್​ ನೀಡ್ತಿದ್ದಾರೆ ಅನ್ನೋದಕ್ಕೆ ಮತ್ತೊಂದು ವಿಡಿಯೋ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಬಳ್ಳಾರಿಯ ಕುಡುತಿನಿ ಪಟ್ಟಣದಲ್ಲಿ ಲಾಕ್ ಮಾಡಲಾಗಿದ್ದ ಅನಧಿಕೃತ ಲಿಕ್ಕರ್ ಶಾಪ್ ರೀ ಓಪನ್​ಗೆ ಪೇದೆಗಳು ಲಂಚ ಪಡೆಯುತ್ತಿದ್ದ ದೃರ್ಶಯ ಸೆರೆಯಾಗಿದೆ. ಇಬ್ಬರು ಪೇದೆಗಳು ಹಣ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಕ್ರಮ ಮಾಡಿ... ಅದರಲ್ಲಿ ನಮಗೊಂದಿಷ್ಟು ಹಣ ಕೊಡಿ ಎಂದು ಹಣ ವಸೂಲಿ ಮಾಡುತ್ತಿರುವುದು ಎಲ್ಲಾ ಕಡೆ ವೈರಲ್ ಆಗಿದೆ.. ಅಚ್ಚರಿ ಅಂದ್ರೆ ಕಡಿಮೆ ಹಣ ನೀಡಿದ್ರೆ ಸಾಲಲ್ಲ ರೀ.. ನಾವು ನಮ್ಮ ಮೇಲಿನ ಅಧಿಕಾರಿಗಳಿಗೂ ಹಣ ನೀಡಬೇಕು, ಒಂದು ರೂಪಾಯಿ ಕಡಿಮೆ ಕೊಟ್ರೂ ತೆಗೆದುಕೊಳ್ಳಲ್ಲ ಎಂದು ಒತ್ತಡ ಹಾಕಿ ಹಣ ವಸೂಲಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಇಬ್ಬರು ಪೇದೆಗಳನ್ನು ಅಮಾನತು ಮಾಡಿದ್ದಾರೆ..