ಕೊನೆಗೂ ವಿಪಕ್ಷಗಳ ಟೀಕೆಗೆ ಕೊನೆಗೂ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಮೋದಿ ನೋಟು ನಿಷೇಧದ ಬಗ್ಗೆ  ಮೌನ ಮುರಿದಿದ್ದಾರೆ.

ನವದೆಹಲಿ(ನ.25): ಕೊನೆಗೂ ವಿಪಕ್ಷಗಳ ಟೀಕೆಗೆ ಕೊನೆಗೂ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಮೋದಿ ನೋಟು ನಿಷೇಧದ ಬಗ್ಗೆ ಮೌನ ಮುರಿದಿದ್ದಾರೆ. ಸಂಸತ್ ಭವನದಲ್ಲಿ ನಡೆಯುತ್ತಿರುವ ಸಂವಿಧಾನ ದಿವಸ ಕಾರ್ಯಕ್ರಮದಲ್ಲಿ ಪ್ರಧಾನಿ ವಿಪಕ್ಷಗಳಿಗೆ ಸರಿಯಾಗಿ ಚಾಟಿ ಬೀಸಿದ್ದಾರೆ. 

ವಿಪಕ್ಷದಲ್ಲಿ ಕೆಲವರು ಹೇಳುತ್ತಿದ್ದಾರೆ ಸರ್ಕಾರ ತಯಾರಿ ಮಾಡಲಿಲ್ಲ ಎಂದು, ಆದರೆ ಅವರ ದುಃಖ ಇರುವುದು ಸರ್ಕಾರ ನಮಗೆ ತಯಾರಿಗೆ ಸಮಯ ಕೊಡಲಿಲ್ಲ ಎಂದು, ಅವರಿಗೆ 72 ಗಂಟೆ ಸಮಯ ಸಿಕ್ಕಿದ್ದರೂ ಸಾಕಿತ್ತು ಕಪ್ಪನ್ನು ಬಿಳಿ ಮಾಡಿಕೊಳ್ಳುತ್ತಿದ್ದರು ಎಂದಿದ್ದಾರೆ. 

ಪ್ರತಿಯೊಬ್ಬನಿಗೂ ಅವರ ಹಣವನ್ನು ಬಳಸುವ ಅಧಿಕಾರವಿದೆ ಆದರೆ ನೋಟ್ ಗಳನ್ನೇ ಬಳಸಬೇಕು ಎಂದಿಲ್ಲ ಎಂದಿರುವ ಮೋದಿ ಡಿಜಿಟಲ್ ಮನಿ ಯತ್ತ ನಾವು ಹೊಳ್ಳಬೇಕಿದೆ ಎಂದಿದ್ದಾರೆ. ಮೊದಲು ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಷಿಕ ಮೂರುವರೆ ಸಾವಿರ ಕೋಟಿ ತೆರಿಗೆ ಬರುತ್ತಿತ್ತು, ಕಳೆದ 15 ದಿನಗಳಲ್ಲಿ 13.5 ಸಾವಿರ ಕೋಟಿ ಹಣ ಬಂದಿದೆ ಎಂದಿದ್ದಾರೆ.