Asianet Suvarna News Asianet Suvarna News

ಬಿಪಿಎಲ್ ಕಾರ್ಡ್`ದಾರರಿಗೆ ಸಿಗಲಿದೆ ನಗದು ಕೂಪನ್

ಸದ್ಯ ಸರ್ಕಾರ ಪಡಿತರ ಚೀಟಿದಾರರಿಗೆ ವಿತರಿಸುತ್ತಿರುವ ಆಹಾರ ಧಾನ್ಯ ಇಷ್ಟವಾಗದೇ ಹೋದಲ್ಲಿ, ನಗದು ಕೂಪನ್ ಪಡೆದು ನಿಮಗೆ ಇಷ್ಟವಾದ ಆಹಾರ ಪದಾರ್ಥಗಳನ್ನ ಆಹಾರ ಇಲಾಖೆಯಿಂದ ಅನುಮತಿ ಪಡೆದ ಕಿರಾಣಿ ಅಂಗಡಿಗಳಲ್ಲಿ ಪಡೆಯಬಹುದಾಗಿದೆ. 

bpl card holders will get cash coupon

ಬೆಂಗಳೂರು(ಡಿ.21); ರಾಜ್ಯ ಸರ್ಕಾರ ಪಡಿತರ ಧಾನ್ಯ ವಿತರಣೆ ವ್ಯವಸ್ಥೆಯನ್ನ ಮತ್ತಷ್ಟು ಉತ್ತಮಗೊಳಿಸಲು ಹಲವು ಸುಧಾರಣೆ ತರಲು ಮುಂದಾಗುತ್ತಿದೆ. ಆಹಾರ ಇಲಾಖೆ ದೇಶದಲ್ಲೇ ಮೊದಲ ಬಾರಿಗೆ ಆಹಾರ ಕೂಪನ್ ಜೊತೆಗೆ ನಗದು ಕೂಪನ್ ನೀಡಲು ಮುಂದಾಗಿದೆ. ಪ್ರಾಯೋಗಿಕವಾಗಿ 3 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ತಿರ್ಮಾನಿಸಿದೆ.

ಸದ್ಯ ಸರ್ಕಾರ ಪಡಿತರ ಚೀಟಿದಾರರಿಗೆ ವಿತರಿಸುತ್ತಿರುವ ಆಹಾರ ಧಾನ್ಯ ಇಷ್ಟವಾಗದೇ ಹೋದಲ್ಲಿ, ನಗದು ಕೂಪನ್ ಪಡೆದು ನಿಮಗೆ ಇಷ್ಟವಾದ ಆಹಾರ ಪದಾರ್ಥಗಳನ್ನ ಆಹಾರ ಇಲಾಖೆಯಿಂದ ಅನುಮತಿ ಪಡೆದ ಕಿರಾಣಿ ಅಂಗಡಿಗಳಲ್ಲಿ ಪಡೆಯಬಹುದಾಗಿದೆ.  ಈ ಕೂಪನ್ ಬೆಂಗಳೂರು ಒನ್ , ಪಂಚಾಯತಿ ಕಚೇರಿಗಳಲ್ಲಿ ಪಡೆಯಬಹುದಾಗಿದೆ. ಮೊದಲಿಗೆ 3 ಸಾವಿರ  ಕಾರ್ಡ್‌`ದಾರರಿಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಫೆಬ್ರವರಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಸರ್ಕಾರ ತಿರ್ಮಾನಿಸಿದ್ದು, ಬಿಪಿಎಲ್ ಕಾರ್ಡ್`ದಾರರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ.