ಅಧಿಕಾರಿಗಳು ಮಾಡುವ ಒಂದೇ ಒಂದು ಎಡವಟ್ಟು ಅದೆಷ್ಟೋ ಜನ ಅಮಾಯಕರ ಪ್ರಾಣ ತೆಗೆಯುತ್ತೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 16 ವರ್ಷದ ಬಾಲಕ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಘಟನೆ ನಡೆದು 10 ದಿನ ಕಳೆದ್ರು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ.

ಬೆಂಗಳೂರು(ಜು.05): ಅಧಿಕಾರಿಗಳು ಮಾಡುವ ಒಂದೇ ಒಂದು ಎಡವಟ್ಟು ಅದೆಷ್ಟೋ ಜನ ಅಮಾಯಕರ ಪ್ರಾಣ ತೆಗೆಯುತ್ತೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 16 ವರ್ಷದ ಬಾಲಕ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಘಟನೆ ನಡೆದು 10 ದಿನ ಕಳೆದ್ರು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ.

ಎರಡು ಕೈಗಳನ್ನು ಕಳೆದುಕೊಂಡಿರುವ ಈ ಯುವಕನ ಹೆಸರು ಕೆವಿನ್​. ಕರಿಯಣ್ಣ ಪಾಳ್ಯದ ನಿವಾಸಿಯಾಗಿರುವ ಕೆವಿನ್​ ಬೆಸ್ಕಾಂ ನಿರ್ಲಕ್ಯಕ್ಕೆ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಾನೆ. ಜೂನ್​ 21ರಂದು ಮನೆ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸಿ ಕೆವಿನ್​ಗೆ ತಗುಲಿದೆ. ಕೆವಿನ್​ ದೇಹದ ಎಡಭಾಗ ಬಹುತೇಕ ಸುಟ್ಟುಹೋಗಿದೆ. ಇದರಿಂದ ಕೆವಿನ್​ನ ಎರಡೂ ಕೈಗಳನ್ನೇ ವೈದ್ಯರು ತೆಗೆದಿದ್ದಾರೆ. ಮಗನ ಪರಿಸ್ಥಿತಿಯಿಂದ ಕಂಗಾಲಾಗಿರುವ ತಾಯಿ ವಿದ್ಯಾ ಕಣ್ಣೀರಿಡುತ್ತಿದ್ದಾರೆ.

ಇಷ್ಟೆಲ್ಲಾ ದುರಂತ ನಡೆದಿದ್ದರೂ ಬೆಸ್ಕಾಂ ಮಾತ್ರ ಎಚ್ಚೆತ್ತುಕೊಂಡಿಲ್ಲ. ಕರಿಯಣ್ಣ ಪಾಳ್ಯದ 2 ನೇ ಮುಖ್ಯ ರಸ್ತೆಯಲ್ಲಿರುವ ಬಹುತೇಕ ಮನೆಗಳ ಮುಂದೆ ಹಾಕಿರುವ ವಿದ್ಯುತ್ತ ತಂತಿಗಳು ಮನೆಗೆ ಅಂಟಿಕೊಂಡಿವೆ. ಈ ವಿದ್ಯುತ್ ತಂತಿಗಳಿಗೆ ಕೇವಲ ಒಂದು ಅಡಿ ಅಂತರವಿದೆ ಅಷ್ಟೇ.. ಯಾವಾಗ ಬೇಕಾದ್ರೂ ಕೆವಿನ್​ಗೆ ಆದಂತ ದುರಂತ ಮತ್ತೆ ಮರುಕಳಿಸಬಹುದು.

ಇನ್ನು ಈ ಘಟನೆ ನಡೆದು 10 ದಿನಗಳು ಕಳೆದ್ದಿದ್ದರೂ ಬೆಸ್ಕಾಂ ಅಧಿಕಾರಿಗಳು ಅತ್ತ ಕಣ್ಣಾಕಿಯೂ ನೋಡಿಲ್ಲ. ಯುವಕನ ಚಿಕಿತ್ಸೆಗೆ ಅಂತಾ ಒಂದು ಲಕ್ಷ ರೂಪಾಯಿ ನೀಡಿ ಕೈತೊಳೆದುಕೊಂಡಿದ್ದಾರೆ. ಆದರೆ ಕೆವಿನ್​ ಚಿಕಿತ್ಸೆಗೆ ದಿನವೊದಕ್ಕೇ ಒಂದೂವರೆ ಲಕ್ಷ ರೂಪಾಯಿ ಹಣ ತಗುಲುತ್ತಿದೆ. ಚಿಕಿತ್ಸೆಯ ವೆಚ್ಚ ಭರಿಸುವ ಶಕ್ತಿ ಇಲ್ಲದೆ ಕೆವಿನ್​ ತಾಯಿ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.