ಕೊಪ್ಪಳ(ಸೆ.20): ಹುಡುಗಿಯರನ್ನು ಚುಡಾಯಿಸುತ್ತಿದ್ದ ಯುವಕರಿಗೆ ಸಾರ್ವಜನಿಕರು ಸರಿಯಾಗಿಯೇ ಧರ್ಮದೇಟು ನೀಡಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ನಗರದ ದೇವರಾಜ ಅರಸ್ ಕಾಲೋನಿಯಲ್ಲಿ ಸೀಮಣ್ಣ, ನಾಗರಾಜ ಅಂಬ ಇಬ್ಬರು ಯುವಕರಿಗೆ ಸಾರ್ವಜನಿಕರು ಗೂಸ ನೀಡಿದ್ದಾರೆ. ಪ್ರೌಢ ಶಾಲೆಗೆ ಹೋಗುತ್ತಿದ್ದ ಹುಡುಗಿಯರನ್ನು ಈ ಇಬ್ಬರು ಯುವಕರು ಚುಡಾಯಿಸುತ್ತಿದ್ದರು ಎನ್ನುವ ಅರೋಪ ಕೇಳಿ ಬಂದಿದೆ.
ಇನ್ನು ಈ ಇಬ್ಬರು ಯುವಕರು ಸೀಮಣ್ಣ, ಕೊಪ್ಪಳ ತಾಲೂಕಿನ ಬೂದಿಹಾಳ ಗ್ರಾಮದವನಾಗಿದ್ದು, ನಾಗರಾಜ ಎಂಬಾತ ಕೊಪ್ಪಳದ ಸಜ್ಜೆಹೊಲ ನಿವಾಸಿ ಎನ್ನಲಾಗಿದೆ. ಸದ್ಯ ಸಾರ್ವಜನಿಕರು ಇಬ್ಬರು ಬೀದಿ ಕಾಮಣ್ಣರನ್ನು ಹಿಡಿದು ಗೂಸ ನೀಡಿ, ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
