ನವದೆಹಲಿ[ಮಾ.14]: ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮತ್ತೊಮ್ಮೆ ಜಾಗತಿಕ ಉಗ್ರನೆಂದು ಘೋಷಿಸಲು ಸಾಧ್ಯವಾಗಿಲ್ಲ. ನಿರೀಕ್ಷೆಯಂತೆ ಮತ್ತೊಮ್ಮೆ ಚೀನಾ ಈ ಘೋಷಣೆಗೆ ಅಡ್ಡಗಾಲು ಹಾಕಿದೆ. ತನ್ನ ಬಳಿ ಇರುವ ವೀಟೋ ಅಧಿಕಾರ ಬಳಸುವ ಮೂಲಕ ಅಜರ್ ನನ್ನು ಜಾರತಿಕ ಉಗ್ರನೆಂದು ಘೋಷಿಸದಂತೆ ತಡೆದಿದೆ. ಭಾರತದಲ್ಲಾದ ಹಲವಾರು ಉಗ್ರ ದಾಳಿಯ ರೂವಾರಿಯಾಗಿರುವ ಅಜರ್ ಅಪಾರ ಸಾವು ನೋವುಗಳಿಗೆ ಕಾರಣನಾಗಿದ್ದಾನೆ. ಸದ್ಯ ಚೀನಾದಿಂದಾಗಿ ಈ ಘೋಷಣೆ ರದ್ದಾಗಿದೆ. ಹೀಗಿದ್ದರೂ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಭಾರತ ಹೇಳಿದೆ.

ಮಸೂದ್‌ ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ತಡೆ!

ಚೀನಾ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸದಂತೆ ತಡೆದಿದ್ದು ಇದೇ ಮೊದಲಲ್ಲ. 2009ರಿಂದ ಈವರೆಗೆ ಒಟ್ಟು 4 ಬಾರಿ ಅಡ್ಡಗಾಲು ಹಾಕಿದೆ. ಚೀನಾದ ಈ ನಡೆ ಸದ್ಯ ಭಾರತೀಯರನ್ನು ಕೆರಳಿಸಿದೆ. ನೆರೆ ರಾಷ್ಟ್ರ ಚೀನಾಗೆ ಬುದ್ಧಿ ಕಲಿಸಲು ಭಾರತೀಯರು ಸಜ್ಜಾಗಿದ್ದು, ಮೇಡ್ ಇನ್ ಚೀನಾ[Made In China] ಸಾಮಾಗ್ರಿಗಳನ್ನು ಬಹಿಷ್ರಿಸುವಂತೆ ಸಾಮಾಝಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಲಾಗಿದೆ.

ಸದ್ಯ ಟ್ವಿಟರ್ ನಲ್ಲಿ #BoycottChineseProducts ಟ್ರೆಂಡಿಂಗ್ ಲಿಸ್ಟ್ ನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಚೀನಾ ವಸ್ತುಗಳನ್ನು ಬಹಿಷ್ಕಸುವುದರಿಂದ, ಪಾಕಿಸ್ತಾನಕ್ಕೆ ನೆರವು ನೀಡುತ್ತಿರುವ ಚೀನಾಗೆ ಹೋಗುವ ಭಾರತೀಯರ ಹಣವನ್ನು ತಡೆಯಬಹುದು ಎಂಬುವುದು ಭಾರತೀಯರ ಲೆಕ್ಕಾಚಾರವಾಗಿದೆ.

ಚೀನಾ ಭಯೋತ್ಪಾದನೆಯನ್ನು ಸಮರ್ಥಿಸುವ ರಾಷ್ಟ್ರ, ಹೀಗಿರುವಾಗ ಭಾರತೀಯರು ಚೀನಾವನ್ನು ಹೀಗೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ಅಭಿಪ್ರಾಯವೂ ಜನರು ವ್ಯಕ್ತಪಡಿಸುತ್ತಿದ್ದಾರೆ.