ಇದು ತಮಾಷೆಯಲ್ಲ....

ಇತ್ತೀಚೆಗೆ ನಮ್ಮ ಯುವ ಜನತೆಯಲ್ಲಿ ಸೆಲ್ಫೀ ಹುಚ್ಚು ಸಿಕ್ಕಾಪಟ್ಟೆಹೆಚ್ಚಾಗಿದೆ. ಆದರೆ, ಸೆಲ್ಫೀಗಾಗಿ ಚಲಿಸುತ್ತಿರುವ ರೈಲಿನ ಹಳಿಗಳ ನಡುವೆ ನಿಂತು ರೈಲನ್ನೇ ತಡೆಯಲು ಯಾರಾದರೂ ಯತ್ನಿಸುತ್ತಾರೆ ಎಂದರೆ ನಂಬಲು ಸಾಧ್ಯವೇ? ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ. ರೈಲಿನ ಜತೆ ಸೆಲ್ಫೀ ತೆಗೆದುಕೊಳ್ಳುವ ಹುಚ್ಚಿನಿಂದಾಗಿ ಬಾಲಕನೋರ್ವ ದೆಹಲಿಗೆ ತೆರಳುತ್ತಿದ್ದ ‘ಸಿಯಾಲ್‌ದಹ ರಾಜಧಾನಿ ಎಕ್ಸ್‌ಪ್ರೆಸ್‌' ರೈಲಿಗೇ ಕೆಂಪು ಬಟ್ಟೆತೋರಿಸಿದ್ದಾನೆ. ಇದರಿಂದ ಗಾಬರಿಗೊಂಡ ರೈಲಿನ ಚಾಲಕ ತುರ್ತು ಬ್ರೇಕ್‌ ಉಪಯೋಗಿಸಿ ರೈಲನ್ನು ನಿಲ್ಲಿಸಿದ್ದಾರೆ. ರೈಲಿನ ಜತೆ ಸೆಲ್ಫೀ ತೆಗೆದುಕೊಂಡ ಬಾಲಕ ಅಲ್ಲಿಂದ ಓಡಿ ಹೋಗಿದ್ದಾನೆ. ಉತ್ತರ ಪ್ರದೇಶದ ಅಲಿಗಡ ಜಿಲ್ಲೆಯ ಪೊರಾ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರ)