ಅಣ್ಣ ತಂಗಿಯ ಅನುಬಂಧಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?ಕ್ಯಾನ್ಸರ್ ಪೀಡಿತ ತಂಗಿಯನ್ನು ಅಣ್ಣ ಸಂತೈಸಿದ ಪರಿ ಎಂತದ್ದು?ಕೊನೆ ಕ್ಷಣದವರೆಗೂ ತಂಗಿಯ ಜೊತೆಗಿದ್ದು ಧೈರ್ಯ ತುಂಬಿದ ಅಣ್ಣಅಣ್ಣ-ತಂಗಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ 

ಮಿಸಿಸಿಪ್ಪಿ(ಜೂ13): ಜಗತ್ತಿನಲ್ಲಿ ಅಣ್ಣ ತಂಗಿಯ ಸಂಬಂಧ ಅತ್ಯಂತ ವಿಶಿಷ್ಟವಾದುದು ಎನ್ನುತ್ತಾರೆ. ಪ್ರೀತಿ, ರಕ್ಷಣೆ, ಕೀಟಲೆ ಇವೆಲ್ಲವೂ ಅಣ್ಣ ತಂಗಿಯಂದಿರ ಸಂಬಂಧದಲ್ಲಿ ಕಾಣುವ ವಿಶಿಷ್ಟ ಅನುಬಂಧ. ಅದರಲ್ಲೂ ಪುಟ್ಟ ತಂಗಿಯ ಪಾಲಿಗಂತೂ ಆಕೆಯ ಅಣ್ಣನೇ ಹಿರೋ ಆದರೆ, ಅಣ್ಣನಿಗೆ ಆತನ ತಂಗಿಯೇ ಫೆವರಿಟ್.

ಈ ಅಣ್ಣ ತಂಗಿಯ ಗಾಢ ಸಂಬಂಧಕ್ಕೆ ಮಿಸಿಸಿಪ್ಪಿಯಲ್ಲಿ ನಡೆದ ಈ ಘಟನೆ ಮತ್ತಷ್ಟು ಪುಷ್ಠಿ ನೀಡಿದೆ. ಮಾರಕ ರೋಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತನ್ನ ತಂಗಿಗೆ ಕೊನೆ ಕ್ಷಣದವರೆಗೂ ಧೈರ್ಯ ತುಂಬಿದ ಅಣ್ಣನ ಕತೆ ಇದು. ಜಾಕ್ಸನ್ ಎಂಬ ಅಣ್ಣ, ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ತನ್ನ ನಾಲ್ಕು ವರ್ಷದ ತಂಗಿ ಆ್ಯಡಿಯ ಆರೈಕೆಯಲ್ಲಿ ನಿರತವಾಗಿರುವ ಫೋಟೋವನ್ನು ತಂದೆ ಮ್ಯಾಟ್ ಸೂಟರ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಜಾಕ್ಸನ್ ತನ್ನ ತಂಗಿ ಆ್ಯಡಿಯ ಕೊನೆ ಕ್ಷಣದಲ್ಲಿ ಆಕೆಯ ಜೊತೆಗಿದ್ದು, ಆಕೆ ಸಾಯುವುದನ್ನು ಕಣ್ಣಾರೆ ಕಂಡಿದ್ದಾನೆ. ಅಲ್ಲದೇ ಕೊನೆ ಕ್ಷಣದವರೆಗೂ ಆಕೆಗೆ ಧೈರ್ಯ ತುಂಬುತ್ತಿರುವ ಜಾಕ್ಸನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Scroll to load tweet…

ಜಾಖ್ಸನ್ ತನ್ನ ತಂಗಿ ಆ್ಯಂಡಿಯನ್ನು ತುಂಬ ಪ್ರೀತಿಸುತ್ತಿದ್ದ. ಇದೇ ಕಾರಣಕ್ಕೆ ಆಕೆಯ ಕೊನೆ ಕ್ಷಣದ ವೇಳೆ ಆಕೆಯ ಜೊತೆಗಿದ್ದು, ಆಕೆಯನ್ನು ಕಳುಹಿಸಿಕೊಟ್ಟ ಎಂದು ತಂದೆ ಮ್ಯಾಟ್ ಸೂಟರ್ ಅತ್ಯಂತ ನೋವಿನಿಂದ ಈ ಫೋಟೋ ಶೇರ್ ಮಾಡಿದ್ದಾರೆ.