Asianet Suvarna News Asianet Suvarna News

ಪಕ್ಷಾಂತರ ಪರ್ವ : ಜೆಡಿಎಸ್ ಮುಖಂಡ ಕಾಂಗ್ರೆಸ್'ಗೆ, ಮಾಜಿ ಸಚಿವ ಬಿಜೆಪಿಗೆ ಸೇರ್ಪಡೆ

ನನ್ನ ತಂದೆಯವರಿಗೂ ಜೆಡಿಎಸ್​ನಲ್ಲಿ ಉಸಿರುಗಟ್ಟುವ ವಾತಾವರಣವಿತ್ತು. ನನ್ನ ತಂದೆಯವರು ಕೊನೆ ಗಳಿಗೆವರೆಗೂ ಜೆಡಿಎಸ್​ನಲ್ಲಿದ್ದರು. ಆದರೆ ಅವರ ನಿಧನದ ನಂತರ ಜೆಡಿಎಸ್​ ನಮ್ಮ ಕುಟುಂಬವನ್ನು ನಿರ್ಲಕ್ಷ್ಯ ಮಾಡಿತು.  ಎಚ್.ಡಿ.ಕೋಟೆ ಜೆಡಿಎಸ್ ಟಿಕೆಟ್ ಖಾತ್ರಿ ಆಗಿರಲಿಲ್ಲ. ನಮ್ಮ ಕುಟುಂಬ ಕಾಂಗ್ರೆಸ್ ಸೇರಲು ನಿರ್ಧರಿಸಿದೆ.

Both Leaders joined another Party

ಮೈಸೂರು(ಫೆ.03): ಇಂದು ರಾಜ್ಯದಲ್ಲಿ ಪಕ್ಷಾಂತರ ಪರ್ವ. ಇಬ್ಬರು ನಾಯಕರು ತಮ್ಮ ಮೂಲ ಪಕ್ಷವನ್ನು ಬಿಟ್ಟು ಬೇರೆ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಜೆಡಿಎಸ್'ನ ಜಿಲ್ಲಾ ಪಂಚಾಯಿತಿ ಸದಸ್ಯತ್ವಕ್ಕೆ ಚಿಕ್ಕಮಾದು ಪುತ್ರ ಅನಿಲ್ ಚಿಕ್ಕಮಾಧು ರಾಜೀನಾಮೆ ನೀಡಿದ್ದು, ಫೆ.5ರಂದು ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್'ಗೆ ಸೇರಲಿದ್ದಾರೆ. ರಾಜೀನಾಮೆ ಬಳಿಕ ಮಾತನಾಡಿದ ಅವರು, ನನ್ನ ತಂದೆಯವರಿಗೂ ಜೆಡಿಎಸ್​ನಲ್ಲಿ ಉಸಿರುಗಟ್ಟುವ ವಾತಾವರಣವಿತ್ತು. ನನ್ನ ತಂದೆಯವರು ಕೊನೆ ಗಳಿಗೆವರೆಗೂ ಜೆಡಿಎಸ್​ನಲ್ಲಿದ್ದರು. ಆದರೆ ಅವರ ನಿಧನದ ನಂತರ ಜೆಡಿಎಸ್​ ನಮ್ಮ ಕುಟುಂಬವನ್ನು ನಿರ್ಲಕ್ಷ್ಯ ಮಾಡಿತು.  ಎಚ್.ಡಿ.ಕೋಟೆ ಜೆಡಿಎಸ್ ಟಿಕೆಟ್ ಖಾತ್ರಿ ಆಗಿರಲಿಲ್ಲ. ನಮ್ಮ ಕುಟುಂಬ ಕಾಂಗ್ರೆಸ್ ಸೇರಲು ನಿರ್ಧರಿಸಿದೆ. ಫೆ.5ರಂದು ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತೇನೆ. ಸಿಎಂ ಸಿದ್ದರಾಮಯ್ಯ ಇರುತ್ತಾರೆ. ಹೈಕಮಾಂಡ್ ಅವಕಾಶ ನೀಡಿದರೆ ಎಚ್​.ಡಿ. ಕೋಟೆಯಿಂದ ಸ್ಪರ್ಧೆ ಮಾಡಲಿದ್ದು, ತಂದೆಯವರ ನಿಧನದ ಅನುಕಂಪ, ಎಲ್ಲ ಸಮುದಾಯಗಳ ಬೆಂಬಲ ನನಗಿದೆ'ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಿಜೆಪಿಗೆ   

ಹೊಸದುರ್ಗದ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವರು ಆದ ಗೂಳಿಹಟ್ಟಿ ಶೇಖರ್ ಇಂದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಸಂಜೆ ಮಲ್ಲೇಶ್ವರಂ ರಾಜ್ಯ  ಬಿಜೆಪಿ ಕಚೇರಿಯಲ್ಲಿ ಸೇರಲಿದ್ದಾರೆ. ಈ ಹಿಂದೆ ಪಕ್ಷೇತರ ಶಾಸಕರಾಗಿದ್ದ ಗೂಳಿಹಟ್ಟಿ ಶೇಖರ್ ಬಿಜೆಪಿ  ಆಡಳಿತಾವಧಿಯಲ್ಲಿ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರಾಗಿದ್ದರು.ಸಚಿವ ಸ್ಥಾನ ಕಳೆದುಕೊಂಡಿದ್ದರಿಂದ ಬಿಜೆಪಿಗೆ ನೀಡಿದ್ದ ಬೆಂಬಲ ಹಿಂಪಡೆದಿದ್ದರು.

Follow Us:
Download App:
  • android
  • ios