ದೇಶ ಸೇವೆಗಾಗಿ ವಿದೇಶದಲ್ಲಿ ದೊರೆತ ಲಕ್ಷಗಟ್ಟಲೇ ಸಂಬಳದ ಕೆಲಸ , ಐಐಎಂ ಇಂದೋರ್'ನಲ್ಲಿನ ಸೀಟು ಎಲ್ಲವನ್ನೂ ತೊರೆದು ದೇಶ ಸೇವೆಗೆ ನಿಂತ ದೇಶ ಪ್ರೇಮಿಯೋರ್ವರಿದ್ದಾರೆ ಎಂದರೆ ನಂಬಲೇಬೇಕು.  ಕೂಲಿ ಕಾರ್ಮಿಕರ ಪುತ್ರನಾದ ಬರ್ನಾನ ಯಾದಗಿರಿ ಎನ್ನುವ ಈ ವ್ಯಕ್ತಿ  ಶನಿವಾರ ಡೆಹ್ರಾಡೂನ್'ನಲ್ಲಿ ನಡೆದ ಪರೇಡ್'ನಲ್ಲಿ  ಸೇನಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ನವದೆಹಲಿ(ಡಿ.10): ದೇಶ ಸೇವೆಗಾಗಿ ವಿದೇಶದಲ್ಲಿ ದೊರೆತ ಲಕ್ಷಗಟ್ಟಲೇ ಸಂಬಳದ ಕೆಲಸ , ಐಐಎಂ ಇಂದೋರ್'ನಲ್ಲಿನ ಸೀಟು ಎಲ್ಲವನ್ನೂ ತೊರೆದು ದೇಶ ಸೇವೆಗೆ ನಿಂತ ದೇಶ ಪ್ರೇಮಿಯೋರ್ವರಿದ್ದಾರೆ ಎಂದರೆ ನಂಬಲೇಬೇಕು. ಕೂಲಿ ಕಾರ್ಮಿಕರ ಪುತ್ರನಾದ ಬರ್ನಾನ ಯಾದಗಿರಿ ಎನ್ನುವ ಈ ವ್ಯಕ್ತಿ ಶನಿವಾರ ಡೆಹ್ರಾಡೂನ್'ನಲ್ಲಿ ನಡೆದ ಪರೇಡ್'ನಲ್ಲಿ ಸೇನಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಇವರ ತಂದೆ ಇಲ್ಲಿಯವರೆಗೂ ಕೂಡ ಪ್ರತಿನಿತ್ಯ 100 ರೂ. ಕೂಲಿಗಾಗಿ ಹೈದರಾಬಾದ್'ನ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬರ್ನಾನ ತಂದೆಗೆ ಅವರು ಪರೇಡ್'ನಲ್ಲಿ ಪಾಸ್ ಔಟ್ ಆಗುವವರೆಗೂ ಕೂಡ ಸೇನಾಪಡೆಯಲ್ಲಿ ಅಧಿಕಾರಿಯಾಗುತ್ತೇನೆ ಎನ್ನುವುದು ತಿಳಿದಿರಲಿಲ್ಲ. ಆದ್ದರಿಂದ ಹೆಚ್ಚು ಸಂಬಳ ಬರುವ ಹುದ್ದೆಯನ್ನು ಬಿಟ್ಟು ತಪ್ಪು ಮಾಡುತ್ತಿದ್ದೀಯಾ ಎಂದು ಹೇಳುತ್ತಿದ್ದರು. ಆದರೆ ಈಗ ಅವರ ಸಂತಸಕ್ಕೆ ಪಾರವೇ ಇಲ್ಲ ಎಂದು ಹೇಳಿದ್ದಾರೆ.

ಹೈದರಾಬಾದ್ ಇಂಟರ್ ನ್ಯಾಷನಲ್ ಇನ್'ಸ್ಟಿಟ್ಯೂಟ್ ಆಫ್ ಇನ್'ಫರ್ಮೇಶನ್ ಟೆಕ್ನಾಲಜಿಯಲ್ಲಿ ಸಾಫ್ಟ್'ವೇರ್ ಇಂಜಿನಯರಿಂಗ್ ಪದವಿ ಪೂರೈಸಿರುವ ಬರ್ನಾನ ಭಾರತೀಯ ಸೇನೆಯನ್ನು ಸೇರುವ ಮೂಲಕ ದೇಶ ಸೇವೆ ಮಾಡಲು ಮುಂದಾಗಿದ್ದಾರೆ.