ಅರ್ಬಾಜ್ ಆಯ್ತು, ಬೆಟ್ಟಿಂಗ್ ಹಗರಣದಲ್ಲಿ ಸಾಜಿದ್ ಹೆಸರು..!

Bookie Sonu Jalan Names Director Sajid Khan in IPL Betting Case
Highlights

ಐಪಿಎಲ್ ಬುಕ್ಕಿ ಸೋನು ಜಲಾನ್, ಬೆಟ್ಟಿಂಗ್ ಹಗರಣದಲ್ಲಿ ಒಂದೊಂದೇ ಬಾಲಿವುಡ್‌ನ ಟಾಪ್ ಸೆಲಿಬ್ರಿಟಿಗಳ ಹೆಸರುಗಳನ್ನು ಸೇರಿಸುತ್ತಿದ್ದಾನೆ. ಅರ್ಬಾಜ್ ಖಾನ್ ಬಳಿಕ ಇದೀಗ ನಿರ್ದೇಶಕ ಸಾಜಿದ್ ಖಾನ್ ಅವರ ಹೆಸರನ್ನೂ ಕೂಡ ಸೋನು ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಳಕು ಹಾಕಿದ್ದಾನೆ. 

ಮುಂಬೈ(ಜೂ.5): ಅರ್ಬಾಜ್ ಖಾನ್ ಐಪಿಎಲ್ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ ತಪ್ಪೊಪ್ಪಿಕೊಂಡ ನಂತರ, ಹೆಸರಾಂತ ಬಾಲಿವುಡ್ ಸೆಲಿಬ್ರಿಟಿಗಳ ಹೆಸರು ಬೆಟ್ಟಿಂಗ್ ಹಗರಣದಲ್ಲಿ ಥಳಕು ಹಾಕಿಕೊಳ್ಳುತ್ತಿದೆ. ಬುಕ್ಕಿ ಸೊನು ಜಲಾನ್ ಅವರಿಂದ  ಅರ್ಬಾಜ್ ಖಾನ್ ಹೆಸರು ಕೇಳಿಬಂದಿತ್ತು.

ಇದೀಗ ಹೆಸರಾಂತ ಚಿತ್ರ ನಿರ್ದೇಶಕ , ನಿರ್ಮಾಪಕ ಸಾಜಿದ್ ಖಾನ್ ಹೆಸರೂ ಕೂಡಾ ಬೆಟ್ಟಿಂಗ್ ಹಗರಣದಲ್ಲಿ ಕೇಳಿ ಬಂದಿದೆ. ಸಾಜಿದ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವ ಸಂಗತಿಯನ್ನು ಖುದ್ದು ಸೋನು ಜಲಾನ್ ಪೊಲೀಸರ ಮುಂದೆ ಬಾಯ್ಬಿಟಿದ್ದಾನೆ.

ಥಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಾಜಿದ್ ಹೆಸರನ್ನು ಉಲ್ಲೇಖಿಸಿದ ಸೋನು ಜಲಾನ್,  ಏಳು ವರ್ಷದ ಹಿಂದೆ ಸಾಜಿದ್  ಕೂಡ ಕ್ರಿಕೆಟ್ ಪಂದ್ಯಗಳ ಮೇಲೆ  ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ಹೇಳಿಕೆ ನೀಡಿದ್ದಾನೆ. ಆದರೆ ವಿಚಾರಣೆ ಮುಗಿಯುವವರೆಗೂ ಸಾಜಿದ್ ಗೆ ಸಮನ್ಸ್ ಜಾರಿ ಮಾಡದಿರಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

loader