18 ತಾಸು ನಡೆದ ಬೋನಿ ಕಪೂರ್ ವಿಚಾರಣೆಯಲ್ಲಿ ಅವರು ಹೇಳಿದ್ದೇನು..?

Boni kapoor Investigation
Highlights

ಇಲ್ಲಿನ ಪೊಲೀಸರು ಶ್ರೀದೇವಿ ಪತಿ ಬೋನಿ ಕಪೂರ್ ಅವರನ್ನು ಸತತ 16-18 ತಾಸು ವಿಚಾರಣೆಗೆ ಒಳಪಡಿಸಿದ್ದಾರೆ. ಹೋಟೆಲ್ ಕೋಣೆಯಲ್ಲಿ ಶ್ರೀದೇವಿ ಅನುಮಾನಾಸ್ಪದವಾಗಿ ಶನಿವಾರ ಸಾವನ್ನಪ್ಪಿದ ನಂತರ ಭಾನುವಾರ ಸಂಜೆ ಬೋನಿ ಕಪೂರ್ ಅವರನ್ನು ಪೊಲೀಸ್ ಹೆಡ್ ಕ್ವಾರ್ಟರ್ಸ್‌ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.

ದುಬೈ: ಇಲ್ಲಿನ ಪೊಲೀಸರು ಶ್ರೀದೇವಿ ಪತಿ ಬೋನಿ ಕಪೂರ್ ಅವರನ್ನು ಸತತ 16-18 ತಾಸು ವಿಚಾರಣೆಗೆ ಒಳಪಡಿಸಿದ್ದಾರೆ. ಹೋಟೆಲ್ ಕೋಣೆಯಲ್ಲಿ ಶ್ರೀದೇವಿ ಅನುಮಾನಾಸ್ಪದವಾಗಿ ಶನಿವಾರ ಸಾವನ್ನಪ್ಪಿದ ನಂತರ ಭಾನುವಾರ ಸಂಜೆ ಬೋನಿ ಕಪೂರ್ ಅವರನ್ನು ಪೊಲೀಸ್ ಹೆಡ್ ಕ್ವಾರ್ಟರ್ಸ್‌ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.

ನಂತರ ಸಾವಿನಲ್ಲಿ ಅವರ ಪಾತ್ರವಿಲ್ಲ ಎಂದು ಕ್ಲೀನ್‌ಚಿಟ್ ನೀಡಿದ್ದಾರೆಂದು ರಿಪಬ್ಲಿಕ್ ಟೀವಿ ವರದಿ ಮಾಡಿದೆ. ನಂತರ ತನಿಖೆಯು ಪ್ರಾಸಿಕ್ಯೂಶನ್ ವಿಭಾಗಕ್ಕೆ ಹಸ್ತಾಂತರವಾದ ಕಾರಣ ಬೋನಿ ಅವರು ಅಲ್ಲಿಯೂ ವಿಚಾರಣೆಗೆ ಹಾಜರಾದರು ಎಂದು ತಿಳಿದುಬಂದಿದೆ.

‘ಶ್ರೀದೇವಿ ಅವರ ಸಾವು ಸಹಜವಾಗಿದ್ದು, ನಮಗೆ ಯಾವುದೇ ಅನುಮಾನ ಇಲ್ಲ’ ಎಂದು ಬೋನಿ ಅವರು ಪ್ರಾಸಿಕ್ಯೂಶನ್ ಮುಂದೆ ತಿಳಿಸಿದರು ಎನ್ನಲಾಗಿದೆ.  ಮದುವೆ ಮುಗಿದ ಮೇಲೆ ಬೋನಿ ಕಪೂರ್ ಅವರು ಮಗಳೊಂದಿಗೆ ಮುಂಬೈಗೆ ವಾಪಸಾಗಿದ್ದರು. ಶ್ರೀದೇವಿ ದುಬೈನಲ್ಲೇ ಉಳಿದಿದ್ದರು. ಆದರೆ, ಶನಿವಾರ ಬೋನಿ ಕಪೂರ್ ದಿಢೀರನೆ ಮತ್ತೆ ದುಬೈಗೆ ತೆರಳಿದ್ದರು. ನಂತರ ಶ್ರೀದೇವಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆದರೆ, ಶ್ರೀದೇವಿಗೆ ಸರ್‌ಪ್ರೈಸ್ ನೀಡಲು ತಾನು ಪೂರ್ವಮಾಹಿತಿ ನೀಡದೆ ದುಬೈಗೆ ತೆರಳಿದ್ದಾಗಿ ಬೋನಿ ಹೇಳಿಕೊಂಡಿದ್ದಾರೆ.

loader