Asianet Suvarna News Asianet Suvarna News

ಅಮೆರಿಕಾ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ನಿವಾಸದಲ್ಲಿ ಬಾಂಬ್ ಪತ್ತೆ

ಸ್ಥಳೀಯ ಮಾಧ್ಯಮಗಳ ವರದಿಯಂತೆ ಬುಧವಾರ ರಾತ್ರಿ 1 ಗಂಟೆ ಸಮಯದಲ್ಲಿ ಸ್ಫೋಟಕ ಪತ್ತೆಯಾಗಿದ್ದು  ಅಮೆರಿಕಾದ ಪ್ರಮುಖ ತನಿಖಾ ಸಂಸ್ಥೆಯಾಗಿರುವ ಎಫ್ ಬಿಐ ಸಂಪೂರ್ಣ ಮಾಹಿತಿಯನ್ನು ಕಲೆಯಾಕುತ್ತಿದೆ.

Bomb found near Bill and Hillary Clintons New York home
Author
Bengaluru, First Published Oct 24, 2018, 7:24 PM IST

ನ್ಯೂಯಾರ್ಕ್ [ಅ.24]: ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್  ಅವರ ನಿವಾಸದಲ್ಲಿ ಜೀವಂತ ಬಾಂಬ್ ಪತ್ತೆಯಾಗಿದೆ

ನ್ಯೂಯಾರ್ಕಿನ ಚಪ್ಪಕ್ವಾ ದಲ್ಲಿರುವ  ಮನೆಯಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿದ್ದು ಫೆಡರಲ್ ಹಾಗೂ ಸ್ಥಳೀಯ ತನಿಖಾ ಸಂಸ್ಥೆಯ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. 

ಸ್ಥಳೀಯ ಮಾಧ್ಯಮಗಳ ವರದಿಯಂತೆ ಬುಧವಾರ ರಾತ್ರಿ 1 ಗಂಟೆ ಸಮಯದಲ್ಲಿ ಸ್ಫೋಟಕ ಪತ್ತೆಯಾಗಿದ್ದು  ಅಮೆರಿಕಾದ ಪ್ರಮುಖ ತನಿಖಾ ಸಂಸ್ಥೆಯಾಗಿರುವ ಎಫ್ ಬಿಐ ಸಂಪೂರ್ಣ ಮಾಹಿತಿಯನ್ನು ಕಲೆಯಾಕುತ್ತಿದೆ.

ನ್ಯೂಯಾರ್ಕ್ ಪಟ್ಟಣದ  30 ಕಿ.ಮೀ ದೂರದಲ್ಲಿರುವ ಚಪ್ಪಕ್ವಾ ದಲ್ಲಿ ಬಿಲ್ ಕ್ಲಿಂಟನ್ ಹಾಗೂ ಹಿಲರಿ ಕ್ಲಿಂಟನ್ ವಾಸವಿದ್ದಾರೆ. 72 ವಯಸ್ಸಿನ ಕ್ಲಿಂಟನ್ 1993 ರಿಂದ 2001ರ ತನಕ  ಅಮೆರಿಕಾದ ಅಧ್ಯಕ್ಷರಾಗಿದ್ದರು.  ಅಮೆರಿಕಾದ ಶತ ಕೋಟ್ಯಾಧೀಶ ಜಾರ್ಜ್  ಸೋರ್ಸ್ ಅವರ ನ್ಯೂಯಾರ್ಕ್ ನಿವಾಸದಲ್ಲೂ ಒಂದು ದಿನದ ಹಿಂದೆಯಷ್ಟೆ ಸ್ಪೋಟಕ ವಸ್ತು ಪತ್ತೆಯಾಗಿತ್ತು.

ಒಬಾಮಾ ನಿವಾಸದಲ್ಲೂ ಪತ್ತೆ

ಮತ್ತೋರ್ವ ಮಾಜಿ ಅಧ್ಯಕ್ಷ ಬರಾಕ್ ಒಬಾಮ ನಿವಾಸದಲ್ಲೂ ಸ್ಫೋಟಕ ಪತ್ತೆಯಾಗಿದ್ದು ಇವರಿಬ್ಬರ ರಕ್ಷಣೆಯ ಹೊಣೆ ಹೊತ್ತಿರುವ ತನಿಖಾ ಸಂಸ್ಥೆ ಸೀಕ್ರೇಟ್ ಸರ್ವೀಸ್ ಬಾಂಬ್ ಗಳನ್ನು ಪತ್ತೆ ಮಾಡಿದೆ. ಮಂಗಳವಾರದಂದು ಇವರಿಬ್ಬರ ನಿವಾಸಕ್ಕೆ ಅನುಮಾನಸ್ಪದ ಅಂಚೆ ಪೊಟ್ಟಣವೊಂದು ಬಂದಿದ್ದು ತನಿಖಾ ಸಂಸ್ಥೆಯವರು ವಾಡಿಕೆಯಂತೆ ಪರಿಶೀಲನೆಗೊಳಪಡಿಸದಾಗ ಬಾಂಬ್ ಇರುವುದು ಪತ್ತೆಯಾಗಿದೆ. ಎರಡೂ ಪೊಟ್ಟಣಗಳಿಗೂ ಸಾಮ್ಯತೆಯಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Bomb found near Bill and Hillary Clintons New York home 

   

Follow Us:
Download App:
  • android
  • ios