ಭಾರತೀಯ ಮೀಸಲು ಪೊಲೀಸ್‌ನ ೩ನೇ ಬಟಾಲಿಯನ್‌ನ ನಾಲ್ವರು ಸಿಬ್ಬಂದಿ, ಉತ್ತರ ಕಾಶ್ಮೀರದ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸೇವೆಯಲ್ಲಿ ನಿರತರಾಗಿದ್ದರು
ಶ್ರೀನಗರ(ಜ.06): ಉತ್ತರ ಕಾಶ್ಮೀರದ ಸೋಪೋರ್ ನಗರದಲ್ಲಿ ಉಗ್ರರು ನಡೆಸಿದ ಸ್ಫೋಟದಲ್ಲಿ ಗಸ್ತು ನಡೆಸುತ್ತಿದ್ದ ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ. ೨೦೧೫ರ ನಂತರ ನಡೆದ ಪ್ರಥಮ ಐಇಡಿ ಸ್ಫೋಟ ಇದಾಗಿದ್ದು, ಬಾರಾಮುಲ್ಲಾ ಜಿಲ್ಲೆಯ ಸೋಪೋರ್ನ ಛೋಟಾ ಬಜಾರ್ ಮತ್ತು ಬಡಾ ಬಜಾರ್ ನಡುವಿನ ಅಂಗಡಿಯೊಂದರ ಬಳಿ ಐಇಡಿ ಅಳವಡಿಸಲಾಗಿತ್ತು. ಭಾರತೀಯ ಮೀಸಲು ಪೊಲೀಸ್ನ ೩ನೇ ಬಟಾಲಿಯನ್ನ ನಾಲ್ವರು ಸಿಬ್ಬಂದಿ, ಉತ್ತರ ಕಾಶ್ಮೀರದ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸೇವೆಯಲ್ಲಿ ನಿರತರಾಗಿದ್ದರು. ಪ್ರತ್ಯೇಕತಾವಾದಿಗಳು ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಭದ್ರತಾ ಕಾರ್ಯದಲ್ಲಿ ಪೊಲೀಸ್ ತೊಡಗಿಸಿಕೊಂಡಿದ್ದರು. ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಸಬ್-ಇನ್ಸ್ಪೆಕ್ಟರ್ ಇರ್ಷಾದ್ ಅಹ್ಮದ್, ಕಾನ್ಸ್ಟೆಬಲ್ಗಳಾದ ಗುಲಾಂ ನಬಿ, ಪರ್ವೇಜ್ ಅಹ್ಮದ್, ಮೊಹಮ್ಮದ್ ಅಮೀನ್ ಮೃತ ಪೊಲೀಸ್ ಸಿಬ್ಬಂದಿ
