ಮೋಹಕ ತಾರೆ, ಬಾಲಿವುಡ್ ನಟಿ ಶ್ರೀದೇವಿ ಇನ್ನಿಲ್ಲ

First Published 25, Feb 2018, 5:26 AM IST
Bollywood star Sridevi dies at 54
Highlights

ಬಾಲಿವುಡ್ ನಟಿ ಶ್ರಿದೇವಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ದೇಶದ ಚಿತ್ರರಂಗವೇ ದಿಗ್ಭ್ರಮೆಗೊಂಡಿದೆ.

ದುಬೈ: ಬಾಲಿವುಡ್ ನಟಿ ಶ್ರಿದೇವಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ದೇಶದ ಚಿತ್ರರಂಗವೇ ದಿಗ್ಭ್ರಮೆಗೊಂಡಿದೆ.

ಬಾಲನಟಿಯಾಗಿ, 4ನೇ ವರ್ಷಕ್ಕೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ 54 ವರ್ಷದ ಈ ನಟಿ ದೂರದ ದುಬೈನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಬಾಲನಟಿಯಾಗಿ ಕನ್ನಡದ 'ಭಕ್ತ ಕುಂಬಾರ', ಬಾಲಭಾರತ ಸೇರಿ ತಮಿಳು, ತೆಲಗು ಚಿತ್ರಗಳಲ್ಲಿಯೂ ನಟಿಸಿದ್ದರು ಶ್ರೀದೇವಿ. ಡಾ.ರಾಜ್‌ಕುಮಾರ್, ರಜನೀಕಾಂತ್, ಕಮಲ್ ಹಾಸನ್, ಚಿರಂಜೀವಿ ಸೇರಿ ಹಲವು ಖ್ಯಾತ ನಟರೊಂದಿಗೆ ನಟಿಸಿದ್ದರು. ಅನಿಲ್‌ ಕಪೂರ್ ಮತ್ತು ಇವರ ಜೋಡಿ ಬಾಲಿವುಡ್‌ನಲ್ಲಿ ಉತ್ತಮ ಹೆಸರು ಮಾಡಿತ್ತು.

ಬಾಲಿವುಡ್ ಚಿತ್ರದಲ್ಲಿ ನಟಿಸಿದ ಮೋಹಕ ತಾರೆ, ದುಬೈನಲ್ಲಿ ವಿವಾಹ ಸಮಾರಂಭಕ್ಕೆ ತೆರಳಿದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂಗೀತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಫೋಟೋವನ್ನು ಶ್ರೀದೇವಿ ಶೇರ್ ಮಾಡಿಕೊಂಡಿದ್ದರು.
 

loader