ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ ಅಮೀರ್ ಖಾನ್| ಮೋದಿ ಯೋಜನೆ ಕೇಳಿ ಸಂತಸಗೊಂಡ ಬಾಲಿವುಡ್ ನಟ| ಮೋದಿ ಅವರ ಜಲಶಕ್ತಿ ಅಭಿಯಾನಕ್ಕೆ ಅಮೀರ್ ಬೆಂಬಲ| ಪಾನಿ ಫೌಂಡೇಶನ್ ಮೂಲಕ ಮೋದಿ ಅಭಿಯನಕ್ಕೆ ಸಾಥ್ ನೀಡುವ ಭರವಸೆ| ಅಮೀರ್ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ|

ನವದೆಹಲಿ(ಜು.02): ಬಾಲಿವುಡ್ ನಟ ಅಮೀರ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರ ಜಲಶಕ್ತಿ ಅಭಿಯನವನ್ನು ಕೊಂಡಾಡಿದ್ದು, ಪ್ರಧಾನಿ ಅವರ ಚಿಂತನೆ ದೂರದೃಷ್ಟಿಯಿಂದ ಕೂಡಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Scroll to load tweet…

ಕೆಲ ದಿನಗಳ ಹಿಂದಷ್ಟೇ ತಮ್ಮ ಮೊದಲ ಮನ್ ಕಿ ಬಾತ್‌ನಲ್ಲಿ ನೀರಿನ ಸಂರಕ್ಷಣೆ ಕುರಿತು ಮಾತನಾಡಿದ್ದ ಪ್ರಧಾನಿ ಮೋದಿ, ಚೆನ್ನೈನಲ್ಲಿ ಉದ್ಭವಿಸಿರುವ ನೀರಿನ ಸಂಕಷ್ಟದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೇ ನೀರಿನ ಸಂರಕ್ಷಣೆಗಾಗಿ ಜಲಶಕ್ತಿ ಅಭಿಯಾನ ಆರಂಭಿಸುವುದಾಗಿ ತಿಳಿಸಿದ್ದರು.

ಮೋದಿ ಅವರ ಅಭಿಯಾನವನ್ನು ಮೆಚ್ಚಿಕೊಂಡಿರುವ ನಟ ಅಮೀರ್ ಖಾನ್, ಈ ಅಭಿಯಾನದಿಂದ ನಿಜಕ್ಕೂ ನೀರಿನ ಸಂರಕ್ಷಣೆಯಾಗಲಿದೆ ಎಂದು ಭರವಸೆ ವ್ಯಕ್ತಡಿಸಿದ್ದಾರೆ. ಅಮೀರ್ ಅವರ 'ಪಾನಿ ಫೌಂಡೇಶನ್' ಮಹರಾಷ್ಟ್ರದ ಬರಪೀಡಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆಗಾಗಿ ಈಗಾಗಲೇ ಕೆಲಸ ನಿರ್ವಹಿಸುತ್ತಿದ್ದು, ಈ ಕಾರ್ಯದಲ್ಲಿ ತಾವು ಮೋದಿ ಅವರ ಸಾಥ್ ನೀಡುವುದಾಗಿ ಅಮೀರ್ ಟ್ವೀಟ್ ಮಾಡಿದ್ದಾರೆ.

Scroll to load tweet…

ಇನ್ನು ಅಮೀರ್ ಟ್ವೀಟ್'ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಜಲಶಕ್ತಿ ಅಭಿಯಾನಕ್ಕೆ ಬೆಂಬಲ ನೀಡಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಅಭಿಯನ ಯಶಸ್ವಿಯಾಗಲು ಅಮೀರ್ ಖಾನ್ ಅವರಿಂದ ಸಲಹೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

View post on Instagram

ಇನ್ನು ಚೆನ್ನೈ ನೀರಿನ ಸಂಕಷ್ಟಕ್ಕೆ ಹಾಲಿವುಡ್ ನಟ ಲಿಯೋನಾರ್ಡೊ ಡಿ ಕ್ಯಾಪ್ರಿಯೋ ಕೂಡ ಆತಂಕ ವ್ಯಕ್ತಪಡಿಸಿದ್ದು, ನೀರಿಲ್ಲದೇ ಸಂಕಷ್ಟ ಎದುರಿಸುತ್ತಿರುವದಕ್ಷಿಣ ಭಾರತದ ಈ ಪ್ರಮುಖ ನಗರವನ್ನು ಮಳೆ ಮಾತ್ರ ರಕ್ಷಿಸಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ.