ಪ್ರಸಿದ್ಧ ಬಾಲಿವುಡ್ ಗಾಯಕಿ ಬಿಜೆಪಿ ಸೇರ್ಪಡೆ

First Published 13, Jul 2018, 3:50 PM IST
Bollywood Singer Kalpana Join BJP
Highlights

ಪ್ರಸಿದ್ಧ ಬಾಲಿವುಡ್ ಗಾಯಕಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ದೃಷ್ಟಿಕೋನವನ್ನು ಮೆಚ್ಚಿ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ಪಾಟ್ನಾ : ಅಸ್ಸಾಂ ಮೂಲದ ಬೋಜ್ ಪುರಿ ಹಾಗೂ ಬಾಲಿವುಡ್ ನ ಪ್ರಸಿದ್ಧ ಗಾಯಕಿ ಕಲ್ಪನಾ  ಪಾಟೊವರಿ  ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನೇತೃತ್ವದಲ್ಲಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. 

ಗುರುವಾರ ಪಕ್ಷ ಸೇರ್ಪಡೆಯಾದ ಕಲ್ಪನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಗುಣ ಹಾಗೂ ಅವರ ದೃಷ್ಟಿಕೋನಗಳನ್ನು ಮೆಚ್ಚಿ ರಾಜಕೀಯಕ್ಕೆ ಆಗಮಿಸುವ ಮನಸ್ಸಾಗಿದ್ದಾಗಿ ಹೇಳಿದ್ದಾರೆ. 

ತಾವು ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಪಕ್ಷವನ್ನು ಸೇರಿಲ್ಲ. ಆದರೆ ತಮ್ಮ ಕೈಲಾದ ಕೆಲಸವನ್ನು  ಪಕ್ಷಕ್ಕಾಗಿ ಮಾಡುವುದಾಗಿ ಹೇಳಿದ್ದಾರೆ.  ಅಲ್ಲದೇ ರಾಜಕೀಯಕ್ಕೆ ಸೇರ್ಪಡೆಯಾದರೂ ಕೂಡ ತಮ್ಮ ಹಾಡುಗಾರಿಕೆ ವೃತ್ತಿಯನ್ನು ಮಾತ್ರ ಎಂದಿಗೂ ತೊರೆಯುವುದಿಲ್ಲ ಎಂದರು. 

loader