2018 ರ ಆಸ್ಕರ್'ಗೆ ಫಾರಿನ್ ಲಾಂಗ್ವೇಜ್ ಫಿಲ್ಮ್ ಕ್ಯಾಟಗರಿಯಲ್ಲಿ ಬಾಲಿವುಡ್ ಚಿತ್ರ ನ್ಯೂಟನ್ ಪ್ರವೇಶ ಪಡೆದಿದೆ.

ನವದೆಹಲಿ (ಸೆ.22): 2018 ರ ಆಸ್ಕರ್'ಗೆ ಫಾರಿನ್ ಲಾಂಗ್ವೇಜ್ ಫಿಲ್ಮ್ ಕ್ಯಾಟಗರಿಯಲ್ಲಿ ಬಾಲಿವುಡ್ ಚಿತ್ರ ನ್ಯೂಟನ್ ಪ್ರವೇಶ ಪಡೆದಿದೆ.

ನ್ಯೂಟನ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜ್'ಕುಮಾರ್ ರಾವ್ ಟ್ವಿಟರ್'ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನನಗೆ ಬಹಳ ಸಂತೋಷವಾಗುತ್ತಿದೆ. ಚಿತ್ರಕ್ಕೆ ಬಹಳ ಚೆನ್ನಾಗಿ ರೆಸ್ಪಾನ್ಸ್ ಇದೆ. ಆಸ್ಕರ್ ಪ್ರಶಸ್ತಿ ರೇಸ್'ನಲ್ಲಿ ಪ್ರವೇಶ ಪಡೆದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಆಸ್ಕರ್'ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದಕ್ಕೆ ಬಹಳ ಹೆಮ್ಮೆ ಎನಿಸುತ್ತಿದೆ. ಅಂತಿಮ ಪಟ್ಟಿಯಲ್ಲಿಯೂ ನ್ಯೂಟನ್ ಚಿತ್ರ ಇರಲಿದೆ ಎಂಬ ಭರವಸೆ ಇದೆ. ಸಾಕಷ್ಟು ಪ್ಯಾಶನ್'ನಿಂದ, ಪ್ರಾಮಾಣಿಕತೆಯಿಂದ ಚಿತ್ರ ಮಾಡಿದ್ದೇವೆ. ಜನರು ನಮ್ಮ ಪರಿಶ್ರಮವನ್ನು ಗುರುತಿಸಿದ್ದಾರೆ ಎಂದು ಸಂತೋಷವಾಗುತ್ತಿದೆ ಎಂದು ರಾಜ್'ಕುಮಾರ್ ಹೇಳಿದ್ದಾರೆ.

ತುಂಬಾ ದೊಡ್ಡ, ಕಮರ್ಷಿಯಲ್, ಮಸಾಲಾ ಚಿತ್ರವನ್ನು ನಾವು ಮಾಡಿಲ್ಲ. ಆದರೂ ಜನ ನಮ್ಮ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಕಥೆ ಹಾಗೂ ಇದನ್ನು ಹೇಳಿರುವ ರೀತಿಯಿಂದ ಎಲ್ಲರ ಮನ ಗೆದ್ದಿದೆ. ನಾವು ಕಥೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಇದರ ಕ್ರೆಡಿಟ್ ನಮ್ಮ ತಂಡಕ್ಕೆ ಸಲ್ಲುತ್ತದೆ ಎಂದು ರಾಜ್'ಕುಮಾರ್ ಹೇಳಿದ್ದಾರೆ.